Skip to main content

Posts

Showing posts from February, 2011

ಸ್ವಪ್ನ

 ಆಕಸ್ಮಿಕವಾಗಿ  (ಅ)ಪರಿಚಿತರು ಎದುರಿಗೆ ಬಂದರೆ ಏನು ಮಾಡುವುದು ? ಒಂದು ಕಾಲದಲ್ಲಿ ಒಟ್ಟಾಗಿ ಆಡಿ ಕುಣಿದ ಬಾಲ್ಯದ ಸ್ನೇಹಿತೆಯೊಬ್ಬಳು ಆಕಸ್ಮಿಕವಾಗಿ ದೊರೆಯುತ್ತಾಳೆ. ತನ್ನನ್ನು ಪರಿಚಯಿಸಿಕೊಂಡು, ನಾನೇ ಅವಳ ಬಾಲ್ಯದ ಗೆಳೆಯನಿರಬೇಕೆಂದು ಊಹಿಸಿ ಜೊತೆಯಲ್ಲಿರುವ ಒಂದು ಫ಼ೋಟೊ ತೋರಿಸಿದಾಗ ನನಗೆ ಅಚ್ಚರಿ ! ಆಶ್ಚರ್ಯ !! ಎದುರಿಗಿರುವವಳು ನನ್ನ ಬಾಲ್ಯದ ಸ್ನೇಹಿತೆ ! ಯಾವುದೋ ಕಾರಣಗಳಿಂದ ದೂರವಾದ ಆ ಸ್ನೇಹ ಇಂದು ಜೊತೆಯಾಗಿದೆ. ಅವಳಲ್ಲಿ ಮನಬಿಚ್ಚಿ ಮಾತನಾಡಬೇಕೆಂಬ ಬಯಕೆ. ಆದರೆ ತನ್ನ ಹೆಸರು ಭವ್ಯ ಎಂದಷ್ಟೇ ಪರಿಚಯಿಸಿಕೊಂಡ  ಅವಳ ಜೊತೆಯೊಂದಿಗಿನ ಸ್ನೇಹ ಕೇವಲ ಕ್ಷಣಿಕವಾಗಿತ್ತು. ಯಾವುದೋ ಕಾರಣಗಳಿಂದ ನನಗೆ ನಿದ್ದೆಯಿಂದ ಎಚ್ಚರವಾಗಿತ್ತು. ಕ್ಷಣದಲ್ಲಿ ಮಾಯವಾದ ಅವಳಲ್ಲಿ, ಪ್ರೀತಿಯ ಕನಸು ಚಿಗುರಿತ್ತು. ಅವಳನ್ನೇ ನೆನೆಯುತ್ತ ಅವಳಿಗೋಸ್ಕರ. . . . .  ಬರೆದೆ ನೀನು ಪ್ರೇಮ ಗೀತೆ ನನ್ನ ಹೃದಯ ಪಟಲದಿ ನಿನ್ನ ಮನದ ಮಾತು ಕೇಳಿ ಬೆಳಗಿತೀದಿನ ಹರುಷದಿ ಕರುಣಿ ನೀನು, ಮೌನಿ ನೀನು ನನ್ನ ಸೆಳೆದೆ ಪ್ರೀತಿಗೆ ನಿನ್ನ ಮನದ ಮಾತು ಕೇಳಿ ಕರಗಿತೀಮನ ಹರುಷದಿ ಕನಸಿನಲ್ಲೂ ನನಸಿನಲ್ಲೂ ನಿನ್ನ ರೂಪ ಕಲ್ಪನೆ ಕನಸಿನ ಈ ಕಾವ್ಯದಲ್ಲಿ ನಿನ್ನದೇ ವರ್ಣನೆ ಕನಸಿನಲ್ಲೇ ನಿನ್ನ ನೋಡಿ ಸೋತೆ ನಿನ್ನ ರೂಪಕೆ ನಿನ್ನ ಭವ್ಯ ರೂಪ ನೋಡಿ ಮಿಡಿದೆ ನಿನ್ನ ಪ್ರೀತಿ