Skip to main content

ಮೌನ..??

ನೀರವ ಮೌನವೋ
ಈ ಜಗ ಬರಿದಾಗಿ
ಕವಿಯಿತೋ ಕಾರ್ಮೋಡ..
ಬತ್ತಿದ ಬಾನಲಿ
ಹನಿಯ ಉಗಮ
ಭೂ ಕಾವಿನ ಆವಿಯಲಿ

ಖಗ ಮೃಗ ಜಲ-ಚರ

ಬದುಕಿನ ಓಟದಿ
ಉದರ ಧಗೆಯಲ್ಲೀ..
ಮನುಜನ ವಾಸವೋ
ನೆತ್ತರು ಬರಿದಾಗಿ
ಸುಡು ನೆತ್ತಿಯ ನೆರಳಲ್ಲಿ

ನಗುವೋ ಅಳುವೋ

ಹೊತ್ತಿದ ದಾಹದಿ
ಕರುಳಿಗೆ ಸಾಂತ್ವಾನ..
ಈ ಜನ-ಮನದಲಿ
ವಿಧಿಯ ನೆರಳಲಿ,
ಬಾಳು ನರಕವು
ಭೂ ತಾಯಿಯ ಮಡಿಲಲ್ಲಿ.

Comments

  1. ಕಲ್ಪನೆಗಳೊಂದಿಗಿನ ಮೌನದ ಮಾತು ತಂಬಾ ಚೆನ್ನಾಗಿದೆ....ಇಷ್ಟವಾಯ್ತು ಮೌನದ ಈ ಭಾವ ...
    ಭಾವ ಬರಹ ಮುಂದುವರೆಸಿ

    ReplyDelete
    Replies
    1. ಕಲ್ಪನೆ ಮೌನದಲ್ಲೇ ಸಾಧ್ಯ.....ಕಲ್ಪಿಸಿದ್ದು ಬರಹವಾಗಿದೆ....
      ಧನ್ಯವಾದಗಳು :)

      Delete

Post a Comment

Popular posts from this blog

ಚುಂಬನದ ಸಿಹಿ..

                                         ನಿನ್ನ ಚುಂಬನದ ಸಿಹಿಯ,                                                     ನಾ ಹೇಗೆ ಬಣ್ಣಿಸಲಿ?                                          ಆಧಾರವಿಲ್ಲವಷ್ಟೆ..                        ...

ಇನಿಯನ ನೆನಪು

ಗುರುತು

ಕಳೆದಿದೆ ನಿನ್ನ ಗುರುತು ಹುಡುಕಲಾಗದೇ ನೆನಪಲಿ ಮತ್ತೆ ಮತ್ತೆ ಮರುಕಳಿಸಿತು ನೆನಪಾಗದ ಈ ಸಮಯದಲಿ ಕೊಂಚವೂ ಸುಳಿವು ಸಿಗುತಿಲ್ಲ ನಿನ್ನ ಭೇಟಿಯ ಚಿತ್ರಣ ಸ್ಥಳವೂ ಅಪರಿಚಿತವಾಗಿಸಿತಲ್ಲ ಗುರುತು, ಪರಿಚಯದ ಮಿಶ್ರಣ ನೀ ಬಂದರೆ ಪರಿಚಯ ಸಿಗಬಹುದೇ? ನನಗೆ ಕಣ್ಣೀರ ಹನಿಯ ಅಳುವಲಿ ಇಷ್ಟಾದರೂ ತಿಳಿಯಬಹುದೇ? ನಿನಗೆ ನಾ ಬದುಕಿರುವುದು ನಿನ್ನದೇ ಅಸ್ಪಷ್ಟ ನೆನಪಲಿ