ಅದ್ಯಾವ ಘಳಿಗೆಯಲ್ಲಿ ಪರಿಚಯವಾದೆಯೋ..??
ಆ ಪರಿಚಯ ಇಂದು ಏಕಮುಖ ಪ್ರೀತಿಯಾಗಿದೆ..!!
ಆ ಪರಿಚಯ ಇಂದು ಏಕಮುಖ ಪ್ರೀತಿಯಾಗಿದೆ..!!
ಹೌದು, ನೀನು ಸಿಕ್ಕಾಗ ನನಗೆ ಕೇವಲ ಪರಿಚಿತಳಾಗಿದ್ದೆ. ನಿನ್ನ ನಗುವೊಂದನ್ನು ನಾನು ಕೇವಲ ಬಯಸಿದ್ದೆ. ನನ್ನ ಗುಣ ನನಗೆ ಹೊಸತಲ್ಲ. ಪರಿಚಯವಾದ ಹುಡುಗಿಯ ಮುಖದಲ್ಲಿ ನಗು ಮೂಡಿಸಿ, ನಾನೂ ನಗುವುದು ನನ್ನ ಅಭ್ಯಾಸ. ಇದು ನನ್ನ ಬಲಹೀನತೆಯಲ್ಲ. ದಯವಿಟ್ಟು ಹಂಗಿಸಿ ನಗಬೇಡ, ಆ ನಗುವನ್ನು ಎಂದಿಗೂ ನಾನು ಬಯಸಿಲ್ಲ. ನಿನ್ನ ಗುಣವನ್ನು ನಾನು ಎಷ್ಟೇ ಅರಿಯಲಿಚ್ಚಿಸಿದರೂ, ಇನ್ನೂ ಅರಿಯಲಾಗಲಿಲ್ಲ. ಅದ್ಯಾಕೋ ನಿನ್ನ ಜೊತೆಯಲ್ಲಿರುವಷ್ಟು ಸಮಯ ನನ್ನ ಮನಸ್ಸು ಶುಭ್ರವಾಗಿರುತ್ತದೆ. ಏನೆಲ್ಲ ಮಾತಾಡಬೇಕೆಂದು ಬರುವೆ, ಆದರೆ ನಿನ್ನ ನೋಡಿದಾಕ್ಷಣ ಕೇವಲ ನಗೆಯಲ್ಲಿನ ಮಾತು ಎಲ್ಲವನ್ನೂ ಮರೆಸಿಬಿಡುತ್ತದೆ. ನಿನ್ನ ಮಾತಿಗೆ ಕೇವಲ ಪ್ರತ್ಯುತ್ತರಗಾರನಾಗಿರುತ್ತೇನೆ ಏಕೋ ತಿಳಿಯೆ. ನನಗನ್ನಿಸಿದ ಹಾಗೆ ಇದು ಪ್ರೀತಿಯಲ್ಲ. ಆದರೆ ಇದು ಆಕರ್ಷಣೆಗಿಂತ ಮಿಗಿಲು. ಒಂದು ತರದಲ್ಲಿ ಪ್ರೀತಿಯೇ ಅಂದಿಟ್ಟುಕೊಳ್ಳೋಣ. ನೀನು ನಿಜವಾಗಿಯೂ ಯಾವ ಬದಲಾವಣೆಯನ್ನೂ ಕಂಡಿಲ್ಲವಾ ನನ್ನಲ್ಲಿ?
ನೀನು ಸಿಕ್ಕ ಆ ದಿನ ಒಂದು ಮಾತಿನಲ್ಲಿ ಮುಗಿಸಿದ್ದೆ ನಿನ್ನ ಹೆಸರು ಕೇಳಿ. ನೆನಪಿಲ್ಲವಾ ನಿನಗೆ ? ನನ್ನ ಹೆಸರನ್ನು ಹೇಳಿರಲಿಲ್ಲ. ನೀನು ಕೇಳಿದ್ದು ಇನ್ನೊಂದು ಭೇಟಿಯಲ್ಲಿ. ಮಾತು ಶುರುವಾಗಿದ್ದೇ ಹಾಗೆ!! ಹೀಗೆ ಪ್ರಾರಂಭವಾದ ಮಾತು ಇಂದು ನಮ್ಮನ್ನು ಇಷ್ಟು ಸಮೀಪ ಬರುವಂತೆ ಮಾಡಿದೆ. ಅಂದು ನಾನಾಗಿಯೇ ನಿನ್ನನ್ನು ಮಾತನಾಡಿಸಿದ್ದಕ್ಕೆ ಇಂದು ಈ ಸ್ನೇಹ ಸಾಧ್ಯವಾಯಿತು. ಅಂದು ನಿನ್ನ ಭೇಟಿಯೇ ವಿಚಿತ್ರ. ಈಗ ದಿನವೂ ನಿನ್ನ ಬಳಿ ಮಾತನಾಡಬಯಸುತ್ತೇನೆ. ಆದರೆ ನೀನಿಲ್ಲ ಜೊತೆಯಲ್ಲಿ. ಜೊತೆಯಲ್ಲಿ ಸಿಕ್ಕ ಕೆಲವು ನಿಮಿಷ ಕಳೆದಿದ್ದೇ ತಿಳಿಯದು. ನಿನಗಿದೆಲ್ಲ ತಿಳಿದಿದ್ದರೆ, ಈ ಕಥೆಯ ಧಾಟಿಯಲ್ಲಿಯೇ ನನ್ನ ಪ್ರೀತಿಯ ಭಾವನೆಗಳನ್ನು ಅರಿತುಬಿಡುತ್ತೀಯಾ.
ನಿನ್ನ ಸನಿಹ ಕೇವಲ ಕ್ಷಣಿಕವಾದರೂ, ದಿನವೂ ಅದನ್ನೇ ಬಯಸುತ್ತೇನೆ. ಇತ್ತೀಚಿನ ದಿನದ ನಿನ್ನ ಭಾವನೆಗಳು, ನೀನೂ ನನಗೆ ತಿಳಿಯದ ಹಾಗೆ ನನ್ನನ್ನೇ ಪ್ರೀತಿಸುತ್ತೀಯ ಅನ್ನಿಸುವಂತೆ ಮಾಡಿದೆ. ಆದರೆ ನೀನು ಅದನ್ನು ಎಂದೂ ತೋರ್ಪಡಿಸಲಿಲ್ಲ. ನಿನ್ನ ನಾಚಿಕೆಯ ಸ್ವಭಾವದಲ್ಲಿ, ಅದೆಷ್ಟೋ ಗುಣಗಳು ನನ್ನ ಭಾವನೆಗೆಳಿಗೆ ಸರಿಹೊಂದುತ್ತದೆ. ನಾನೂ ಅದನ್ನೇ ಬಯಸಿದ್ದು. ನೀನು ಸ್ವಲ್ಪವೂ ಇದನ್ನು ಗಮನಿಸಿಲ್ಲವಾ ಅಥವಾ ಇದೆಲ್ಲ ಹುಡುಗರ ಪರೀಕ್ಷೆಯ ಅಸ್ತ್ರವೋ. ನನ್ನನ್ನು ಜಾಸ್ತಿ ಕಾಡಬೇಡ. ನಿನಗೆ ನನ್ನ ತಾಳ್ಮೆಯ ಬಗೆಗಿನ ನಂಬಿಕೆ ಹೊರಟು ಹೋದರೆ ಕಷ್ಟ. ನೀನು ಸನಿಹ ಕೂತು ಹರಟುವ ಆ ಸಮಯ ಹೊಸ ಜಗತ್ತನ್ನು ಪರಿಚಯಿಸಿದಂತೆ. ಆದೆರೆ ನೀನು ಹೋದರೆ, ಇಡೀ ಪ್ರಪಂಚದಲ್ಲಿ ನಾನೊಬ್ಬನೇ ಅನಿಸುತ್ತದೆ....ಏಕಾಂಗಿ....!!!!
ನಾನು ಒಬ್ಬಂಟಿಗನೆಂದು ನಿನ್ನ ಮನಸ್ಸನ್ನು ಬಯಸಿಲ್ಲ. ನಮ್ಮಿಬ್ಬರ ಹೃದಯವನ್ನು ವಿಭಾಗಿಸಿ, ಒಂದನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವ ಬಯಕೆ. ನಾನೋ, ನನ್ನ ಹೃದಯವನ್ನು ವಿಭಾಗಿಸಿ, ಒಂದು ಭಾಗದ ನನ್ನ ಮನಸ್ಸಿನಲ್ಲಿ ಹುಟ್ಟುವ ಪ್ರೀತಿ-ಭಾವನೆಗಳಿಗೆ ನಿನ್ನ ಮನಸ್ಸು ಯೋಚಿಸಬಹುದಾದಂತಹ ಭಾವನೆಗಳನ್ನು ಕಲ್ಪಿಸಿಕೊಳ್ಳುತ್ತೇನೆ. ಅದೇ ಭಾವನೆ ನೀನೂ ತೋರ್ಪಡಿಸಿದರೆ, ನನ್ನ ಹೃದಯಕ್ಕೆ ಜೀವ. ತಪ್ಪಿದಲ್ಲಿ ನನ್ನ ಮನಸ್ಸು ಇಬ್ಭಾಗ. ಅದು ನಿನಗೆ ಎಂದಿಗೂ ತಿಳಿಯದಂತೆ ಇರಬೇಡ. ನಿನ್ನ ನೆನಪಿನಲ್ಲಿ ಹುಚ್ಚನಾಗಲು ಎಂದಿಗೂ ಬಯಸಿಲ್ಲ. ಸಮೀಪವಿಲ್ಲದಿದ್ದರೂ, ಪರಿಚಿತಳಾಗಿ, ಸ್ನೇಹಿತೆಯಾಗಿದ್ದುಬಿಡು.
ಅದೆಷ್ಟೋ ಸಲ ನೀನು ನನ್ನ ಬಳಿ ಬಂದಾಗ, ನಿನ್ನ ಅಪರಿಚಿತ ಮಂದಹಾಸವನ್ನು ಗಮನಿಸಿದ್ದೇನೆ. ಆದರೆ ಆ ಭಾವನೆಗಳನ್ನು ತಿಳಿಯಲು ಅಶಕ್ಯನಾಗಿದ್ದೇನೆ. ನೀನೂ ಇದನ್ನೇ ಹೇಳಲು ಹೊರಟರೆ, ನನಗೂ ಖುಷಿ. ನಿನ್ನ ಭಾವನೆಗಳಿಗೆ ವಿರುದ್ಧವಾಗಿ ಎಂದೂ ನಾನು ಆಹ್ವಾನಿಸಿಲ್ಲ. ಕಲ್ಪನೆಯ ಸೌಧವನ್ನು ಕಟ್ಟಲು ಶಕ್ಯನೇ ವಿನ: ಪ್ರೇಮ ಸೌಧವನ್ನಲ್ಲ. ಇಬ್ಬರೂ ಸೇರಿ ಕಟ್ಟಲು ನೀ ಸಹಕರಿಸಿದರೆ, ನನ್ನಷ್ಟು ಸಂತೋಷಪಡುವವರಿಲ್ಲ.
ನಿನಗೆ ಅರ್ಧೈಸಲು, ನೀನು ಸನಿಹ ಬಂದಾಗ ಹೇಳುವ ಕೇವಲ ನಾಲ್ಕು ಮಾತುಗಳಷ್ಟೇ ಸಮಯವಿದೆ. ಆದರೆ ನಿನ್ನ ನಗುವಿನ ಮೋಡಿ, ನನ್ನ ಮೌನಿಯಾಗಿಸುವುದಂತೂ ಖಚಿತ. ಹುಡುಗನಾಗಿ ತಿಳಿಮನಸ್ಸಿನಿಂದ ಪ್ರೀತಿ ನಿವೇದಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಪ್ರೀತಿಸುವ ಮನಸ್ಸನ್ನು ನೀನು ಖಂಡಿತವಾಗಿಯೂ ಪ್ರೀತಿಸುತ್ತೀಯಾ ಎಂದುಕೊಂಡಿರುವೆ. ಹೋಗಲು ಹಲವಾರು ದಾರಿಗಳಿದ್ದರೂ, ಪ್ರೀತಿಸಲು ಒಂದೇ ದಾರಿಯಲ್ಲಿ ಹೋಗಬಯಸುವವನು ನಾನು. ಪ್ರೀತಿಸುವುದೂ ನಿನ್ನನ್ನೇ. ಭಾವನೆಗಳಿರದ ಮನಸ್ಸಿನಿಂದ ಬಂದು ನನ್ನನ್ನು ಮಾತನಾಡಿಸಬೇಡ. ಮುಂದಿನ ಭೇಟಿಯ ತನಕ ಕಾಯುವ ತಾಳ್ಮೆ ಖಂಡಿತವಾಗಿಯೂ ಇಲ್ಲ.
ಮನಸಾರೆಯಾಗಿ ಆಹ್ವಾನಿಸಿದ್ದೇನೆ....ಪ್ರೀತಿಸುವ ಮನಸ್ಸಿನೊಂದಿಗೆ ಬಾ....
ಇಂತಿ ನಿನ್ನ ಪ್ರೀತಿಯ,
ನಿನ್ನ ಪ್ರಿಯಕರ.

Comments
Post a Comment