Skip to main content

Posts

ಯೇನೆಂದು ವರ್ಣಿಸಲಿ ನಿನ್ನ....!!!!

* My Lyric for The Music " ಯೇನೆಂದು ಹೆಸರಿಡಲಿ........ ". A song from the Movie " ಅಣ್ಣಾ ಬಾಂಡ್ ".

ಅವಳ ಗೆಳೆತನದಲ್ಲಿ...

ಕರೆಯದ ಮದುವೆಗೆ ಗೀತೆಯೊಂದು ಉಡುಗೊರೆ...

            ಈ ಹುಡುಗೀರೇ ಹೀಗಾ ? ಅವರ ಹೃದಯದಲ್ಲಿ ಸ್ನೇಹ ಎಂಬುದಕ್ಕೆ ಜಾಗವಿಲ್ಲವಾ !? ಅಥವಾ ಸ್ನೇಹ ಅವರಿಗೇ ಇಷ್ಟವಿರುವುದಿಲ್ಲವೋ ನಾತಿಳಿಯೆ. ನನ್ನ ಬಾಲ್ಯದ ಸ್ನೇಹಿತರೆಲ್ಲರೂ ಹೀಗೆ ಅನ್ನಿಸುತ್ತದೆ. ಅವರೆಲ್ಲರೂ ಆ ದಿನಗಳನ್ನು ಬಹುಷಃ ಮರೆತೇ ಬಿಟ್ಟಿರಬೇಕು ಅಥವಾ ನಂತರದ ದಿನಗಳಲ್ಲಿ ಅವರಿಗೆ ನೆನಪಿಸಿಕೊಳ್ಳಲು ಸಾಧ್ಯವಾಗಲಿಲ್ಲವಾ ? ಅದೇನೋ ನಾ ತಿಳಿಯೆ. ಈ ವೈಜ್ಞಾನಿಕ ಯುಗದಲ್ಲಿ ಅಪರಿಚಿತರೇ ಪರಿಚಿತರಾಗುವ ಸಮಯದಲ್ಲಿ, ಪರಿಚಿತರನ್ನು ಹುಡುಕುವುದು ನನಗೂ ಕಷ್ಟವಾಯಿತು. ಅದೇನೇ ಆಗಲಿ, ಅವರಿಗೆ ನನ್ನ ಪರಿಚಯವಿಲ್ಲವೋ, ನನ್ನ ಪರಿಚಯದ ನೆನೆಪಿದೆಯೋ ನಾ ಅರಿಯೆ. ಈ ಸಂದರ್ಭದಲ್ಲಿ ನನಗೆ ತಿಳಿಯಲ್ಪಟ್ಟಂತೆ ನನ್ನ ಸ್ನೇಹಿತೆಯೊಬ್ಬಳು ವಿವಾಹವಾಗುತ್ತಿದ್ದಾಳೆ. ನನ್ನನ್ನು ವಿವಾಹಕ್ಕೆ ಆಮಂತ್ರಿಸದಿರುವುದಕ್ಕೆ ನನಗೇನೂ ಬೇಸರವಿಲ್ಲ. ಆದರೆ ಅವಳಿಗೆ ವಿವಾಹ ಶುಭ ಕೋರದಿದ್ದರೆ ಆ ಗೆಳೆತನ ಸಾರ್ಥಕವಾಗಲಾರದು. ಹಾಗಾಗಿ ಅವಳಿಗೆ ಶುಭಕೋರುತ್ತ ಈ ಗೀತೆಯನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ.   ಹೇ ಗೆಳತೀ..,  ನೀ ಮರೆತು ಹೋದೆಯಾ  ನಮ್ಮ ಆ ದಿನದ ಸ್ನೇಹವಾ ಮಾತು ಮೌನವಾಯಿತು    ನೆನಪು ನೀ ಅಳಿಸಿಬಿಟ್ಟೆಯಾ ಸ್ನೇಹ ನೆನಪಿಲ್ಲವೇ ನಿನಗೆ, ಈ ಸ್ನೇಹ ಭಾರವೇ ಮತ್ತೆ, ಅದೇಕೆ ನಾಚಿಕೆ ನಮ್ಮ ಈ ಸ್ನೇಹ ಬೆಸುಗೆಗೆ ಮನವು ನಲಿದಾಡಿತು ನಿನ್ನ ಆ ಸ್ನೇಹದ ...

ಮಳೆಯಲಿ ನಿನ್ನ ಜೊತೆಯಲಿ..,,

ಈ ಇರುಳಲಿ ನಿನ್ನ ಜೊತೆಯಲಿ ... ನಾ ನೆನೆದೆನು ಇಂದು ಮಳೆಯಲಿ ಆ ತಂಪು ನೀರಿನ ಚಳಿಯಲಿ ... ಪ್ರೇಮಾಂಕುರವು ಈ ಮನದಲಿ . ತಂಗಾಳಿ ಬೀಸಿದ ಆ ಕ್ಷಣದಲಿ ... ನೀ ನಡೆದೆ ನನ್ನ ಜೊತೆಯಲಿ ನಿನ್ನ ಸಂಗಡ ಈ ಮಳೆಯಲಿ ... ನನ್ನನೇ ಮರೆತೆ ನಿನ್ನ ಪ್ರೀತಿಲಿ . ನನ್ನ ಮನವು ನಲಿದಿದೆ ಈ ಖುಷಿಯಲಿ ... ನೀನೆಂದೂ ಇರುವೆ ನನ್ನ ಕನಸಲಿ ನಮ್ಮ ಪ್ರೀತಿಯ ಬೆಸುಗೆ ಈ ಮಳೆಯಲಿ ... ಚಂದಿರನೆ ಸಾಕ್ಷಿ ಈ ಇರುಳಲಿ .    ** ಈ ಸಾಲುಗಳನ್ನು ಬರೆಯಲು ನನಗೆ ಸಲಹೆಯನ್ನಿತ್ತ ನನ್ನ ಗೆಳತಿಗೆ ಅರ್ಪಣೆ.

ಅವಳನ್ನೇ ನೆನೆದು..,,

  ನಾ ಬರೆದೆನು ಕವನ ಅವಳನ್ನೇ ನೆನೆದು ಅವಳಿಗಿಷ್ಟವೆಂದು ನನ್ನ ಕನಸನ್ನೇ ಮರೆತು . ಓದಿದಳೊಂದುದಿನ ನನ್ನ ಕನಸಿನ ಕವನವ ನಕ್ಕು ಖುಷಿಯಿಂದ ಹೇಳಿದಳು ನಿನ್ನ ಕವನವು ಸುಂದರ . ನಕ್ಕು ಖುಷಿಯಾದೆ ನಾ ಅವಳ ಆ ನಗುವಿಗೆ ಬರೆದೆ ಇನ್ನೊಂದಿಷ್ಟು ಕವನ ನನ್ನವಳ ಪ್ರೀತಿಗೆ .!

ಹೀಗೊಂದು ಪ್ರೇಮ ಪತ್ರ..,,

ನಿನ್ನ ನಗು ನನ್ನ ಕಣ್ಣಂಚಲಿ ನಿನ್ನ ಮಾತು ನನ್ನ ಮನದಾಳದಿ ನಿನ್ನ ನೆನಪೊಂದೆ ಸಾಕು ನನ್ನ ಈ ಜೀವಕೆ ನಿನ್ನ ಮನಸೊಮ್ಮೆ ಕೊಡು ನನ್ನ ಈ ಪ್ರೀತಿಗೆ ! ನಿನ್ನ ಕಂಡಾಕ್ಷಣ ಪ್ರೀತಿ ಚಿಗುರೊಡೆಯಿತು ಮನದ ಆ ಕಂಪನ ನಿನಗೆ ತಿಳಿಯದೇ ಹೋಯಿತು..! ಮೌನ ನೋವಿಗೆ ಕಾರಣ ಹೃದಯ ನಗುವಿಗೆ ಕಾತುರ ನಿನ್ನ ಕನಸಿಗೆ ನಾನು ಹೆಗಲಾಗುವೆ ನನ್ನ ಪ್ರೀತಿಯ ನೀನು ಸ್ವೀಕರಿಸು ಬಾ..!

ಸೌಂದರ್ಯ

ಅದೊಂದು ಮುಂಜಾವು. ಮೈಕೊರೆಯುವ ಚಳಿ. ಸುತ್ತಲೂ ಮಂಜು ಕವಿದ ವಾತಾವರಣ. ಆ ತಿಳಿ ಮುಂಜಾವಿನಲ್ಲಿ ನನ್ನದೊಂದು ವಾಯುವಿಹಾರ. ಸುತ್ತಲಿನ ಪರಿಸರದಲ್ಲಿ ಆ ದಿನ ಅದೇನೋ ಹೊಸತನ. ಗೆಳೆಯನ ಮುಖ ಸ್ಪಷ್ಟವಾಗಿ ಕಾಣದಿದ್ದರೂ ಅವನೊಂದಿಗಿನ ಮುಂಜಾನೆಯ ಹರಟೆ ಮಜವಾಗಿತ್ತು ! ದಾರಿಯುದ್ದಕ್ಕೂ ಅದೆಷ್ಟೋ ಜನರು ವಾಯುವಿಹಾರಕ್ಕೆ ಬಂದಿದ್ದರು. ಹೀಗೆ ಸಾಗಿದ ದಾರಿಯಲ್ಲಿ ನನಗೆ ಕಂಡಿದ್ದು ಅವಳ ಸುಂದರ ನಗುಮೊಗ. ಅವಳ ಮುಖದಲ್ಲಿ ಅದೇನೋ ಕಾಂತಿ, ತೇಜಸ್ಸು !!  ನನಗರಿವಿಲ್ಲದೇ ನನ್ನ ಮನಸ್ಸು ಅತ್ತ ಕಡೆ ಸರಿದಿತ್ತು.  ಆ ಮಂಜಿನಲ್ಲೂ ಅವಳ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹಾಗೆ ಸಾಗಿದ ನಮ್ಮ ವಿಹಾರ ಅವಳಿಂದ ಬಹು ದೂರ ಸರಿದಿತ್ತು. ಹಿಂದಿರುಗಿ ಬಂದಾಗ ಅವಳು ಮಾಯವಾಗಿದ್ದಳು. ಆ ಮುಂಜಾನೆಯ ಮಂಜಿನಲ್ಲಿ ಕಂಡ ಸೌಂದರ್ಯವನ್ನು ಹುಡುಕುತ್ತಾ. . . . . ನಿನ್ನ ನೋಡಿದ ಆ ಕ್ಷಣ ಮನವಾಯ್ತು ಹರುಷ ಈ ದಿನ ಆ ಕ್ಷಣ ಕಂಡ ನಗುಮೊಗ ಅಚ್ಚಾಯ್ತು ಹೃದಯದಿ ಸುಂದರ !   ಬರೆದೆ ನಿನಗೋಸ್ಕರ ನಾ ನನ್ನ ಕನಸಿನ ಈ ಪ್ರೇಮವಾ ಮುಡುಪಾಗಿ ಇಟ್ಟಿರುವೆ ನಾ ನನ್ನ ಹೃದಯವ ನಿನಗೋಸ್ಕರ ! ಕಾದಿರುವೆ ನಿನಗೋಸ್ಕರ ನಾ ಈ ಪ್ರೀತಿಯ ಮಾರ್ಗದಿ ನೀ ಬಂದು ಸಂತೈಸು ನನ್ನ ಈ ಮನದ ಪ್ರೀತಿನಾ !