Skip to main content

ಸೌಂದರ್ಯ


ಅದೊಂದು ಮುಂಜಾವು. ಮೈಕೊರೆಯುವ ಚಳಿ. ಸುತ್ತಲೂ ಮಂಜು ಕವಿದ ವಾತಾವರಣ. ಆ ತಿಳಿ ಮುಂಜಾವಿನಲ್ಲಿ ನನ್ನದೊಂದು ವಾಯುವಿಹಾರ. ಸುತ್ತಲಿನ ಪರಿಸರದಲ್ಲಿ ಆ ದಿನ ಅದೇನೋ ಹೊಸತನ. ಗೆಳೆಯನ ಮುಖ ಸ್ಪಷ್ಟವಾಗಿ ಕಾಣದಿದ್ದರೂ ಅವನೊಂದಿಗಿನ ಮುಂಜಾನೆಯ ಹರಟೆ ಮಜವಾಗಿತ್ತು ! ದಾರಿಯುದ್ದಕ್ಕೂ ಅದೆಷ್ಟೋ ಜನರು ವಾಯುವಿಹಾರಕ್ಕೆ ಬಂದಿದ್ದರು. ಹೀಗೆ ಸಾಗಿದ ದಾರಿಯಲ್ಲಿ ನನಗೆ ಕಂಡಿದ್ದು ಅವಳ ಸುಂದರ ನಗುಮೊಗ. ಅವಳ ಮುಖದಲ್ಲಿ ಅದೇನೋ ಕಾಂತಿ, ತೇಜಸ್ಸು !!  ನನಗರಿವಿಲ್ಲದೇ ನನ್ನ ಮನಸ್ಸು ಅತ್ತ ಕಡೆ ಸರಿದಿತ್ತು.  ಆ ಮಂಜಿನಲ್ಲೂ ಅವಳ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹಾಗೆ ಸಾಗಿದ ನಮ್ಮ ವಿಹಾರ ಅವಳಿಂದ ಬಹು ದೂರ ಸರಿದಿತ್ತು. ಹಿಂದಿರುಗಿ ಬಂದಾಗ ಅವಳು ಮಾಯವಾಗಿದ್ದಳು. ಆ ಮುಂಜಾನೆಯ ಮಂಜಿನಲ್ಲಿ ಕಂಡ ಸೌಂದರ್ಯವನ್ನು ಹುಡುಕುತ್ತಾ. . . . .

ನಿನ್ನ ನೋಡಿದ ಆ ಕ್ಷಣ
ಮನವಾಯ್ತು ಹರುಷ ಈ ದಿನ
ಆ ಕ್ಷಣ ಕಂಡ ನಗುಮೊಗ
ಅಚ್ಚಾಯ್ತು ಹೃದಯದಿ ಸುಂದರ !
 
ಬರೆದೆ ನಿನಗೋಸ್ಕರ ನಾ
ನನ್ನ ಕನಸಿನ ಈ ಪ್ರೇಮವಾ
ಮುಡುಪಾಗಿ ಇಟ್ಟಿರುವೆ ನಾ
ನನ್ನ ಹೃದಯವ ನಿನಗೋಸ್ಕರ !

ಕಾದಿರುವೆ ನಿನಗೋಸ್ಕರ ನಾ
ಈ ಪ್ರೀತಿಯ ಮಾರ್ಗದಿ
ನೀ ಬಂದು ಸಂತೈಸು
ನನ್ನ ಈ ಮನದ ಪ್ರೀತಿನಾ !

Comments

  1. ಮಗಾ ಲವ್ವಲ್ಲಿ ಬಿದ್ರೆ ಹಿಂಗೇ ಆಗದು!! ಹುಷಾರ್:)

    ReplyDelete
  2. to ಜೇಪೀ ಭಟ್ : ಹಂಗೆಲ್ಲ ಎಂತದೂ ಇಲ್ಯೋ ....:)

    ReplyDelete

Post a Comment

Popular posts from this blog

ಚುಂಬನದ ಸಿಹಿ..

                                         ನಿನ್ನ ಚುಂಬನದ ಸಿಹಿಯ,                                                     ನಾ ಹೇಗೆ ಬಣ್ಣಿಸಲಿ?                                          ಆಧಾರವಿಲ್ಲವಷ್ಟೆ..                        ...

ಇನಿಯನ ನೆನಪು

ಗುರುತು

ಕಳೆದಿದೆ ನಿನ್ನ ಗುರುತು ಹುಡುಕಲಾಗದೇ ನೆನಪಲಿ ಮತ್ತೆ ಮತ್ತೆ ಮರುಕಳಿಸಿತು ನೆನಪಾಗದ ಈ ಸಮಯದಲಿ ಕೊಂಚವೂ ಸುಳಿವು ಸಿಗುತಿಲ್ಲ ನಿನ್ನ ಭೇಟಿಯ ಚಿತ್ರಣ ಸ್ಥಳವೂ ಅಪರಿಚಿತವಾಗಿಸಿತಲ್ಲ ಗುರುತು, ಪರಿಚಯದ ಮಿಶ್ರಣ ನೀ ಬಂದರೆ ಪರಿಚಯ ಸಿಗಬಹುದೇ? ನನಗೆ ಕಣ್ಣೀರ ಹನಿಯ ಅಳುವಲಿ ಇಷ್ಟಾದರೂ ತಿಳಿಯಬಹುದೇ? ನಿನಗೆ ನಾ ಬದುಕಿರುವುದು ನಿನ್ನದೇ ಅಸ್ಪಷ್ಟ ನೆನಪಲಿ