Skip to main content

ಸೌಂದರ್ಯ


ಅದೊಂದು ಮುಂಜಾವು. ಮೈಕೊರೆಯುವ ಚಳಿ. ಸುತ್ತಲೂ ಮಂಜು ಕವಿದ ವಾತಾವರಣ. ಆ ತಿಳಿ ಮುಂಜಾವಿನಲ್ಲಿ ನನ್ನದೊಂದು ವಾಯುವಿಹಾರ. ಸುತ್ತಲಿನ ಪರಿಸರದಲ್ಲಿ ಆ ದಿನ ಅದೇನೋ ಹೊಸತನ. ಗೆಳೆಯನ ಮುಖ ಸ್ಪಷ್ಟವಾಗಿ ಕಾಣದಿದ್ದರೂ ಅವನೊಂದಿಗಿನ ಮುಂಜಾನೆಯ ಹರಟೆ ಮಜವಾಗಿತ್ತು ! ದಾರಿಯುದ್ದಕ್ಕೂ ಅದೆಷ್ಟೋ ಜನರು ವಾಯುವಿಹಾರಕ್ಕೆ ಬಂದಿದ್ದರು. ಹೀಗೆ ಸಾಗಿದ ದಾರಿಯಲ್ಲಿ ನನಗೆ ಕಂಡಿದ್ದು ಅವಳ ಸುಂದರ ನಗುಮೊಗ. ಅವಳ ಮುಖದಲ್ಲಿ ಅದೇನೋ ಕಾಂತಿ, ತೇಜಸ್ಸು !!  ನನಗರಿವಿಲ್ಲದೇ ನನ್ನ ಮನಸ್ಸು ಅತ್ತ ಕಡೆ ಸರಿದಿತ್ತು.  ಆ ಮಂಜಿನಲ್ಲೂ ಅವಳ ಮುಖ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹಾಗೆ ಸಾಗಿದ ನಮ್ಮ ವಿಹಾರ ಅವಳಿಂದ ಬಹು ದೂರ ಸರಿದಿತ್ತು. ಹಿಂದಿರುಗಿ ಬಂದಾಗ ಅವಳು ಮಾಯವಾಗಿದ್ದಳು. ಆ ಮುಂಜಾನೆಯ ಮಂಜಿನಲ್ಲಿ ಕಂಡ ಸೌಂದರ್ಯವನ್ನು ಹುಡುಕುತ್ತಾ. . . . .

ನಿನ್ನ ನೋಡಿದ ಆ ಕ್ಷಣ
ಮನವಾಯ್ತು ಹರುಷ ಈ ದಿನ
ಆ ಕ್ಷಣ ಕಂಡ ನಗುಮೊಗ
ಅಚ್ಚಾಯ್ತು ಹೃದಯದಿ ಸುಂದರ !
 
ಬರೆದೆ ನಿನಗೋಸ್ಕರ ನಾ
ನನ್ನ ಕನಸಿನ ಈ ಪ್ರೇಮವಾ
ಮುಡುಪಾಗಿ ಇಟ್ಟಿರುವೆ ನಾ
ನನ್ನ ಹೃದಯವ ನಿನಗೋಸ್ಕರ !

ಕಾದಿರುವೆ ನಿನಗೋಸ್ಕರ ನಾ
ಈ ಪ್ರೀತಿಯ ಮಾರ್ಗದಿ
ನೀ ಬಂದು ಸಂತೈಸು
ನನ್ನ ಈ ಮನದ ಪ್ರೀತಿನಾ !

Comments

  1. ಮಗಾ ಲವ್ವಲ್ಲಿ ಬಿದ್ರೆ ಹಿಂಗೇ ಆಗದು!! ಹುಷಾರ್:)

    ReplyDelete
  2. to ಜೇಪೀ ಭಟ್ : ಹಂಗೆಲ್ಲ ಎಂತದೂ ಇಲ್ಯೋ ....:)

    ReplyDelete

Post a Comment

Popular posts from this blog

ಚುಂಬನದ ಸಿಹಿ..

                                         ನಿನ್ನ ಚುಂಬನದ ಸಿಹಿಯ,                                                     ನಾ ಹೇಗೆ ಬಣ್ಣಿಸಲಿ?                                          ಆಧಾರವಿಲ್ಲವಷ್ಟೆ..                        ...

ಸ್ವಪ್ನ

 ಆಕಸ್ಮಿಕವಾಗಿ  (ಅ)ಪರಿಚಿತರು ಎದುರಿಗೆ ಬಂದರೆ ಏನು ಮಾಡುವುದು ? ಒಂದು ಕಾಲದಲ್ಲಿ ಒಟ್ಟಾಗಿ ಆಡಿ ಕುಣಿದ ಬಾಲ್ಯದ ಸ್ನೇಹಿತೆಯೊಬ್ಬಳು ಆಕಸ್ಮಿಕವಾಗಿ ದೊರೆಯುತ್ತಾಳೆ. ತನ್ನನ್ನು ಪರಿಚಯಿಸಿಕೊಂಡು, ನಾನೇ ಅವಳ ಬಾಲ್ಯದ ಗೆಳೆಯನಿರಬೇಕೆಂದು ಊಹಿಸಿ ಜೊತೆಯಲ್ಲಿರುವ ಒಂದು ಫ಼ೋಟೊ ತೋರಿಸಿದಾಗ ನನಗೆ ಅಚ್ಚರಿ ! ಆಶ್ಚರ್ಯ !! ಎದುರಿಗಿರುವವಳು ನನ್ನ ಬಾಲ್ಯದ ಸ್ನೇಹಿತೆ ! ಯಾವುದೋ ಕಾರಣಗಳಿಂದ ದೂರವಾದ ಆ ಸ್ನೇಹ ಇಂದು ಜೊತೆಯಾಗಿದೆ. ಅವಳಲ್ಲಿ ಮನಬಿಚ್ಚಿ ಮಾತನಾಡಬೇಕೆಂಬ ಬಯಕೆ. ಆದರೆ ತನ್ನ ಹೆಸರು ಭವ್ಯ ಎಂದಷ್ಟೇ ಪರಿಚಯಿಸಿಕೊಂಡ  ಅವಳ ಜೊತೆಯೊಂದಿಗಿನ ಸ್ನೇಹ ಕೇವಲ ಕ್ಷಣಿಕವಾಗಿತ್ತು. ಯಾವುದೋ ಕಾರಣಗಳಿಂದ ನನಗೆ ನಿದ್ದೆಯಿಂದ ಎಚ್ಚರವಾಗಿತ್ತು. ಕ್ಷಣದಲ್ಲಿ ಮಾಯವಾದ ಅವಳಲ್ಲಿ, ಪ್ರೀತಿಯ ಕನಸು ಚಿಗುರಿತ್ತು. ಅವಳನ್ನೇ ನೆನೆಯುತ್ತ ಅವಳಿಗೋಸ್ಕರ. . . . .  ಬರೆದೆ ನೀನು ಪ್ರೇಮ ಗೀತೆ ನನ್ನ ಹೃದಯ ಪಟಲದಿ ನಿನ್ನ ಮನದ ಮಾತು ಕೇಳಿ ಬೆಳಗಿತೀದಿನ ಹರುಷದಿ ಕರುಣಿ ನೀನು, ಮೌನಿ ನೀನು ನನ್ನ ಸೆಳೆದೆ ಪ್ರೀತಿಗೆ ನಿನ್ನ ಮನದ ಮಾತು ಕೇಳಿ ಕರಗಿತೀಮನ ಹರುಷದಿ ಕನಸಿನಲ್ಲೂ ನನಸಿನಲ್ಲೂ ನಿನ್ನ ರೂಪ ಕಲ್ಪನೆ ಕನಸಿನ ಈ ಕಾವ್ಯದಲ್ಲಿ ನಿನ್ನದೇ ವರ್ಣನೆ ಕನಸಿನಲ್ಲೇ ನಿನ್ನ ನೋಡಿ ಸೋತೆ ನಿನ್ನ ರೂಪಕೆ ನಿನ್ನ ಭವ್ಯ ರೂಪ ನೋಡಿ ...

ಹೀಗೊಂದು ಪ್ರೇಮ ಪತ್ರ..,,

ನಿನ್ನ ನಗು ನನ್ನ ಕಣ್ಣಂಚಲಿ ನಿನ್ನ ಮಾತು ನನ್ನ ಮನದಾಳದಿ ನಿನ್ನ ನೆನಪೊಂದೆ ಸಾಕು ನನ್ನ ಈ ಜೀವಕೆ ನಿನ್ನ ಮನಸೊಮ್ಮೆ ಕೊಡು ನನ್ನ ಈ ಪ್ರೀತಿಗೆ ! ನಿನ್ನ ಕಂಡಾಕ್ಷಣ ಪ್ರೀತಿ ಚಿಗುರೊಡೆಯಿತು ಮನದ ಆ ಕಂಪನ ನಿನಗೆ ತಿಳಿಯದೇ ಹೋಯಿತು..! ಮೌನ ನೋವಿಗೆ ಕಾರಣ ಹೃದಯ ನಗುವಿಗೆ ಕಾತುರ ನಿನ್ನ ಕನಸಿಗೆ ನಾನು ಹೆಗಲಾಗುವೆ ನನ್ನ ಪ್ರೀತಿಯ ನೀನು ಸ್ವೀಕರಿಸು ಬಾ..!