Skip to main content

ಕರೆಯದ ಮದುವೆಗೆ ಗೀತೆಯೊಂದು ಉಡುಗೊರೆ...

           ಈ ಹುಡುಗೀರೇ ಹೀಗಾ ? ಅವರ ಹೃದಯದಲ್ಲಿ ಸ್ನೇಹ ಎಂಬುದಕ್ಕೆ ಜಾಗವಿಲ್ಲವಾ !? ಅಥವಾ ಸ್ನೇಹ ಅವರಿಗೇ ಇಷ್ಟವಿರುವುದಿಲ್ಲವೋ ನಾತಿಳಿಯೆ. ನನ್ನ ಬಾಲ್ಯದ ಸ್ನೇಹಿತರೆಲ್ಲರೂ ಹೀಗೆ ಅನ್ನಿಸುತ್ತದೆ. ಅವರೆಲ್ಲರೂ ಆ ದಿನಗಳನ್ನು ಬಹುಷಃ ಮರೆತೇ ಬಿಟ್ಟಿರಬೇಕು ಅಥವಾ ನಂತರದ ದಿನಗಳಲ್ಲಿ ಅವರಿಗೆ ನೆನಪಿಸಿಕೊಳ್ಳಲು ಸಾಧ್ಯವಾಗಲಿಲ್ಲವಾ ? ಅದೇನೋ ನಾ ತಿಳಿಯೆ. ಈ ವೈಜ್ಞಾನಿಕ ಯುಗದಲ್ಲಿ ಅಪರಿಚಿತರೇ ಪರಿಚಿತರಾಗುವ ಸಮಯದಲ್ಲಿ, ಪರಿಚಿತರನ್ನು ಹುಡುಕುವುದು ನನಗೂ ಕಷ್ಟವಾಯಿತು. ಅದೇನೇ ಆಗಲಿ, ಅವರಿಗೆ ನನ್ನ ಪರಿಚಯವಿಲ್ಲವೋ, ನನ್ನ ಪರಿಚಯದ ನೆನೆಪಿದೆಯೋ ನಾ ಅರಿಯೆ. ಈ ಸಂದರ್ಭದಲ್ಲಿ ನನಗೆ ತಿಳಿಯಲ್ಪಟ್ಟಂತೆ ನನ್ನ ಸ್ನೇಹಿತೆಯೊಬ್ಬಳು ವಿವಾಹವಾಗುತ್ತಿದ್ದಾಳೆ. ನನ್ನನ್ನು ವಿವಾಹಕ್ಕೆ ಆಮಂತ್ರಿಸದಿರುವುದಕ್ಕೆ ನನಗೇನೂ ಬೇಸರವಿಲ್ಲ. ಆದರೆ ಅವಳಿಗೆ ವಿವಾಹ ಶುಭ ಕೋರದಿದ್ದರೆ ಆ ಗೆಳೆತನ ಸಾರ್ಥಕವಾಗಲಾರದು. ಹಾಗಾಗಿ ಅವಳಿಗೆ ಶುಭಕೋರುತ್ತ ಈ ಗೀತೆಯನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ.

 

ಹೇ ಗೆಳತೀ..,
 ನೀ ಮರೆತು ಹೋದೆಯಾ
 ನಮ್ಮ ಆ ದಿನದ ಸ್ನೇಹವಾ
ಮಾತು ಮೌನವಾಯಿತು
   ನೆನಪು ನೀ ಅಳಿಸಿಬಿಟ್ಟೆಯಾ

ಸ್ನೇಹ ನೆನಪಿಲ್ಲವೇ
ನಿನಗೆ, ಈ ಸ್ನೇಹ ಭಾರವೇ
ಮತ್ತೆ, ಅದೇಕೆ ನಾಚಿಕೆ
ನಮ್ಮ ಈ ಸ್ನೇಹ ಬೆಸುಗೆಗೆ

ಮನವು ನಲಿದಾಡಿತು
ನಿನ್ನ ಆ ಸ್ನೇಹದ ನೆನಪಿಗೆ
ಹೃದಯ ಶುಭ ಕೋರಿತು
ಗೆಳತೀ, ಈ ನಿನ್ನ ಮದುವೆಗೆ

ನಮ್ಮ ಸ್ನೇಹಕೋಸ್ಕರ
ನನ್ನ ಈ ಗೀತೆ ಕಾಣಿಕೆ
ಬದುಕು ಬಹುದೂರ ಸಾಗಲಿ
ನಿಮ್ಮ ಬಾಳು ಹಸನಾಗಲಿ

Comments

Post a Comment

Popular posts from this blog

ಚುಂಬನದ ಸಿಹಿ..

                                         ನಿನ್ನ ಚುಂಬನದ ಸಿಹಿಯ,                                                     ನಾ ಹೇಗೆ ಬಣ್ಣಿಸಲಿ?                                          ಆಧಾರವಿಲ್ಲವಷ್ಟೆ..                        ...

ಸ್ವಪ್ನ

 ಆಕಸ್ಮಿಕವಾಗಿ  (ಅ)ಪರಿಚಿತರು ಎದುರಿಗೆ ಬಂದರೆ ಏನು ಮಾಡುವುದು ? ಒಂದು ಕಾಲದಲ್ಲಿ ಒಟ್ಟಾಗಿ ಆಡಿ ಕುಣಿದ ಬಾಲ್ಯದ ಸ್ನೇಹಿತೆಯೊಬ್ಬಳು ಆಕಸ್ಮಿಕವಾಗಿ ದೊರೆಯುತ್ತಾಳೆ. ತನ್ನನ್ನು ಪರಿಚಯಿಸಿಕೊಂಡು, ನಾನೇ ಅವಳ ಬಾಲ್ಯದ ಗೆಳೆಯನಿರಬೇಕೆಂದು ಊಹಿಸಿ ಜೊತೆಯಲ್ಲಿರುವ ಒಂದು ಫ಼ೋಟೊ ತೋರಿಸಿದಾಗ ನನಗೆ ಅಚ್ಚರಿ ! ಆಶ್ಚರ್ಯ !! ಎದುರಿಗಿರುವವಳು ನನ್ನ ಬಾಲ್ಯದ ಸ್ನೇಹಿತೆ ! ಯಾವುದೋ ಕಾರಣಗಳಿಂದ ದೂರವಾದ ಆ ಸ್ನೇಹ ಇಂದು ಜೊತೆಯಾಗಿದೆ. ಅವಳಲ್ಲಿ ಮನಬಿಚ್ಚಿ ಮಾತನಾಡಬೇಕೆಂಬ ಬಯಕೆ. ಆದರೆ ತನ್ನ ಹೆಸರು ಭವ್ಯ ಎಂದಷ್ಟೇ ಪರಿಚಯಿಸಿಕೊಂಡ  ಅವಳ ಜೊತೆಯೊಂದಿಗಿನ ಸ್ನೇಹ ಕೇವಲ ಕ್ಷಣಿಕವಾಗಿತ್ತು. ಯಾವುದೋ ಕಾರಣಗಳಿಂದ ನನಗೆ ನಿದ್ದೆಯಿಂದ ಎಚ್ಚರವಾಗಿತ್ತು. ಕ್ಷಣದಲ್ಲಿ ಮಾಯವಾದ ಅವಳಲ್ಲಿ, ಪ್ರೀತಿಯ ಕನಸು ಚಿಗುರಿತ್ತು. ಅವಳನ್ನೇ ನೆನೆಯುತ್ತ ಅವಳಿಗೋಸ್ಕರ. . . . .  ಬರೆದೆ ನೀನು ಪ್ರೇಮ ಗೀತೆ ನನ್ನ ಹೃದಯ ಪಟಲದಿ ನಿನ್ನ ಮನದ ಮಾತು ಕೇಳಿ ಬೆಳಗಿತೀದಿನ ಹರುಷದಿ ಕರುಣಿ ನೀನು, ಮೌನಿ ನೀನು ನನ್ನ ಸೆಳೆದೆ ಪ್ರೀತಿಗೆ ನಿನ್ನ ಮನದ ಮಾತು ಕೇಳಿ ಕರಗಿತೀಮನ ಹರುಷದಿ ಕನಸಿನಲ್ಲೂ ನನಸಿನಲ್ಲೂ ನಿನ್ನ ರೂಪ ಕಲ್ಪನೆ ಕನಸಿನ ಈ ಕಾವ್ಯದಲ್ಲಿ ನಿನ್ನದೇ ವರ್ಣನೆ ಕನಸಿನಲ್ಲೇ ನಿನ್ನ ನೋಡಿ ಸೋತೆ ನಿನ್ನ ರೂಪಕೆ ನಿನ್ನ ಭವ್ಯ ರೂಪ ನೋಡಿ ...

ಹೀಗೊಂದು ಪ್ರೇಮ ಪತ್ರ..,,

ನಿನ್ನ ನಗು ನನ್ನ ಕಣ್ಣಂಚಲಿ ನಿನ್ನ ಮಾತು ನನ್ನ ಮನದಾಳದಿ ನಿನ್ನ ನೆನಪೊಂದೆ ಸಾಕು ನನ್ನ ಈ ಜೀವಕೆ ನಿನ್ನ ಮನಸೊಮ್ಮೆ ಕೊಡು ನನ್ನ ಈ ಪ್ರೀತಿಗೆ ! ನಿನ್ನ ಕಂಡಾಕ್ಷಣ ಪ್ರೀತಿ ಚಿಗುರೊಡೆಯಿತು ಮನದ ಆ ಕಂಪನ ನಿನಗೆ ತಿಳಿಯದೇ ಹೋಯಿತು..! ಮೌನ ನೋವಿಗೆ ಕಾರಣ ಹೃದಯ ನಗುವಿಗೆ ಕಾತುರ ನಿನ್ನ ಕನಸಿಗೆ ನಾನು ಹೆಗಲಾಗುವೆ ನನ್ನ ಪ್ರೀತಿಯ ನೀನು ಸ್ವೀಕರಿಸು ಬಾ..!