Skip to main content

ಪಾರಿಜಾತಾ...

ದಾರಿಯಲೊಮ್ಮೆ, ಒಮ್ಮೆ
ದಾರಿಯಲೊಮ್ಮೆ ಸಿಕ್ಕಿಬಿಟ್ಲು ಜಾತಾ
ಜಾತ ಪಾರಿಜಾತಾ !
ನಿನ್ನ ಹೂವನಡಿಗೆ, ನಡಿಗೆ
ನಿನ್ನ ಹೂವನಡಿಗೆಯಿಂದೇ
ಹೃದಯ ಘಾತ
ಜಾತ ಪಾರಿಜಾತಾ !

ವಯಸಿನಿಂದ ಬಂದೆ
ಮನಸು ಮಾತ್ರ ನಂದೆ
ಮನಸು ಕೊಡಲೆಂದೇ
ನಿನಮನೆ ಬಳಿಬಂದೆ
ನಿನ್ನ ಮನಸು ಕೊಟ್ಟುಹೋಗೆ ಜಾತಾ,
ಜಾತ ಪಾರಿಜಾತಾ !

ಮೈಸೂರ್ ಮಲ್ಲಿಗೆ ತಂದೆ
ಸೆಂಟು ಗಿಂಟು ನಿಂದೆ
Colour ಚೂಡಿದಾರ ಒಂದೇ
ಹಾಕ್ಕೊಂಬಿಡು ಬಂದೆ
ದುಡ್ಡು ಗಿಡ್ಡು ಕಟ್ಕೊಂಬಾರೆ ಜಾತಾ,
ಜಾತ ಪಾರಿಜಾತಾ !

ಕಲರ್ TV ತಂದೆ
ಕಲರ್ Filmi ಗೆಂದೇ
ವರ್ಷ ಪೂರ್ತಿ ಬಂದೆ
ನಿನಗೋಸ್ಕರ ಹಿಂದೇ
ಹಳೆ ಚಪ್ಲೀಲ್ ಹೊಡಿಬೇಡ ಜಾತಾ,
ಜಾತ ಪಾರಿಜಾತಾ !

Comments

  1. ಏನೊ ಹೊಸತರದ ಸಾಲುಗಳು ಅಧುನಿಕ ಸಮ್ಮಿಶ್ರಣದ ಕವನಿಕ್ (ಕವನ+Lyric). ಕನ್ನಡದ ಕವಿತೆಗಳಲ್ಲಿ ಆಂಗ್ಲ ಭಾಷೆಯ ಶಬ್ಧಗಳನ್ನ ಬೆರೆಸದಿದ್ದರೆ ಇನ್ನು ಚಂದದವಾಗಿ ಮೂಡಿಬರುತ್ತಿತ್ತೇನೊ ಅನಿಸ್ತು. ಒಳ್ಳೆಯ ಪ್ರಯತ್ನ ಮುಂದುವರೆಯಲಿ.

    ReplyDelete
    Replies
    1. "ಕವನಿಕ್" ನ ಪ್ರಾರಂಭ..... :P

      Delete

Post a Comment

Popular posts from this blog

ಚುಂಬನದ ಸಿಹಿ..

                                         ನಿನ್ನ ಚುಂಬನದ ಸಿಹಿಯ,                                                     ನಾ ಹೇಗೆ ಬಣ್ಣಿಸಲಿ?                                          ಆಧಾರವಿಲ್ಲವಷ್ಟೆ..                        ...

ಇನಿಯನ ನೆನಪು

ಗುರುತು

ಕಳೆದಿದೆ ನಿನ್ನ ಗುರುತು ಹುಡುಕಲಾಗದೇ ನೆನಪಲಿ ಮತ್ತೆ ಮತ್ತೆ ಮರುಕಳಿಸಿತು ನೆನಪಾಗದ ಈ ಸಮಯದಲಿ ಕೊಂಚವೂ ಸುಳಿವು ಸಿಗುತಿಲ್ಲ ನಿನ್ನ ಭೇಟಿಯ ಚಿತ್ರಣ ಸ್ಥಳವೂ ಅಪರಿಚಿತವಾಗಿಸಿತಲ್ಲ ಗುರುತು, ಪರಿಚಯದ ಮಿಶ್ರಣ ನೀ ಬಂದರೆ ಪರಿಚಯ ಸಿಗಬಹುದೇ? ನನಗೆ ಕಣ್ಣೀರ ಹನಿಯ ಅಳುವಲಿ ಇಷ್ಟಾದರೂ ತಿಳಿಯಬಹುದೇ? ನಿನಗೆ ನಾ ಬದುಕಿರುವುದು ನಿನ್ನದೇ ಅಸ್ಪಷ್ಟ ನೆನಪಲಿ