ಕಳೆದಿದೆ ನಿನ್ನ ಗುರುತು ಹುಡುಕಲಾಗದೇ ನೆನಪಲಿ ಮತ್ತೆ ಮತ್ತೆ ಮರುಕಳಿಸಿತು ನೆನಪಾಗದ ಈ ಸಮಯದಲಿ ಕೊಂಚವೂ ಸುಳಿವು ಸಿಗುತಿಲ್ಲ ನಿನ್ನ ಭೇಟಿಯ ಚಿತ್ರಣ ಸ್ಥಳವೂ ಅಪರಿಚಿತವಾಗಿಸಿತಲ್ಲ ಗುರುತು, ಪರಿಚಯದ ಮಿಶ್ರಣ ನೀ ಬಂದರೆ ಪರಿಚಯ ಸಿಗಬಹುದೇ? ನನಗೆ ಕಣ್ಣೀರ ಹನಿಯ ಅಳುವಲಿ ಇಷ್ಟಾದರೂ ತಿಳಿಯಬಹುದೇ? ನಿನಗೆ ನಾ ಬದುಕಿರುವುದು ನಿನ್ನದೇ ಅಸ್ಪಷ್ಟ ನೆನಪಲಿ
ನೀರ ಮೇಲಿನ ಗುಳ್ಳೆಯನ್ನ ಕತ್ತಿ ಹಾಕಲಗುವುದಿಲ್ಲ. ಅದ ಮುಟ್ಟಿದಾಗ ಒಡೆಯುವುದು. ಬದುಕು ಹಾರುವ ಕಪ್ಪೆಯ ತರಹ. ಅದ ಹಿಡಿದು ಬುಟ್ಟಿಯಲಿ ತುಂಬಿದಂತೆ ಈ ಜೀವನ.
ReplyDeleteಅದು ಯಾವುದೇ ಇದ್ದರೂ, ಬದುಕು ಗುಳ್ಳೆಯಂತೆ ಒಡೆದು ಛಿದ್ರವಾಗಬಾರದಷ್ಟೇ....
Delete