ಭಾವನೆಗಳ ಮಾತಿಗೆ
ಬಣ್ಣ ಹಚ್ಚುವ ಆಸೆ
ಅನುದಿನವೂ ನೆನೆದ ಕನಸಿಗೆ..
ಕಣ್ಣ ರೆಪ್ಪೆಗೆ ಹಚ್ಚಿದ ಕಾಡಿಗೆಯಿಂದ
ಬೊಟ್ಟೊಂದನಿಡುವೆಯಾ
ನಮ್ಮೀ ಪ್ರೀತಿಯ ಪುಟದಂಚಲಿ,
ಹೆಜ್ಜೆ ಜೊತೆಯಿಡುವ ಮುನ್ನ!!!!
ಕಳೆದಿದೆ ನಿನ್ನ ಗುರುತು ಹುಡುಕಲಾಗದೇ ನೆನಪಲಿ ಮತ್ತೆ ಮತ್ತೆ ಮರುಕಳಿಸಿತು ನೆನಪಾಗದ ಈ ಸಮಯದಲಿ ಕೊಂಚವೂ ಸುಳಿವು ಸಿಗುತಿಲ್ಲ ನಿನ್ನ ಭೇಟಿಯ ಚಿತ್ರಣ ಸ್ಥಳವೂ ಅಪರಿಚಿತವಾಗಿಸಿತಲ್ಲ ಗುರುತು, ಪರಿಚಯದ ಮಿಶ್ರಣ ನೀ ಬಂದರೆ ಪರಿಚಯ ಸಿಗಬಹುದೇ? ನನಗೆ ಕಣ್ಣೀರ ಹನಿಯ ಅಳುವಲಿ ಇಷ್ಟಾದರೂ ತಿಳಿಯಬಹುದೇ? ನಿನಗೆ ನಾ ಬದುಕಿರುವುದು ನಿನ್ನದೇ ಅಸ್ಪಷ್ಟ ನೆನಪಲಿ
ಪುಟ್ಟ ಸಾಲುಗಳಲ್ಲಿ ಪುಟಗಟ್ಟಲೇ ಬರೆಯೋ ತರಹದ ಭಾವಗಳ ರವಾನಿಸೋ ಚಂದದ ಪದಗಳು.
ReplyDeletenicely presented ..Liked :)
ಪುಟ್ಟ ಸಂದೇಶದಲ್ಲಿ, "ಭಾವನೆ"ಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು :)
Delete