ಭಾವನೆಗಳ ಮಾತಿಗೆ
ಬಣ್ಣ ಹಚ್ಚುವ ಆಸೆ
ಅನುದಿನವೂ ನೆನೆದ ಕನಸಿಗೆ..
ಕಣ್ಣ ರೆಪ್ಪೆಗೆ ಹಚ್ಚಿದ ಕಾಡಿಗೆಯಿಂದ
ಬೊಟ್ಟೊಂದನಿಡುವೆಯಾ
ನಮ್ಮೀ ಪ್ರೀತಿಯ ಪುಟದಂಚಲಿ,
ಹೆಜ್ಜೆ ಜೊತೆಯಿಡುವ ಮುನ್ನ!!!!
ನಿನ್ನ ನಗು ನನ್ನ ಕಣ್ಣಂಚಲಿ ನಿನ್ನ ಮಾತು ನನ್ನ ಮನದಾಳದಿ ನಿನ್ನ ನೆನಪೊಂದೆ ಸಾಕು ನನ್ನ ಈ ಜೀವಕೆ ನಿನ್ನ ಮನಸೊಮ್ಮೆ ಕೊಡು ನನ್ನ ಈ ಪ್ರೀತಿಗೆ ! ನಿನ್ನ ಕಂಡಾಕ್ಷಣ ಪ್ರೀತಿ ಚಿಗುರೊಡೆಯಿತು ಮನದ ಆ ಕಂಪನ ನಿನಗೆ ತಿಳಿಯದೇ ಹೋಯಿತು..! ಮೌನ ನೋವಿಗೆ ಕಾರಣ ಹೃದಯ ನಗುವಿಗೆ ಕಾತುರ ನಿನ್ನ ಕನಸಿಗೆ ನಾನು ಹೆಗಲಾಗುವೆ ನನ್ನ ಪ್ರೀತಿಯ ನೀನು ಸ್ವೀಕರಿಸು ಬಾ..!
ಈ ಇರುಳಲಿ ನಿನ್ನ ಜೊತೆಯಲಿ ... ನಾ ನೆನೆದೆನು ಇಂದು ಮಳೆಯಲಿ ಆ ತಂಪು ನೀರಿನ ಚಳಿಯಲಿ ... ಪ್ರೇಮಾಂಕುರವು ಈ ಮನದಲಿ . ತಂಗಾಳಿ ಬೀಸಿದ ಆ ಕ್ಷಣದಲಿ ... ನೀ ನಡೆದೆ ನನ್ನ ಜೊತೆಯಲಿ ನಿನ್ನ ಸಂಗಡ ಈ ಮಳೆಯಲಿ ... ನನ್ನನೇ ಮರೆತೆ ನಿನ್ನ ಪ್ರೀತಿಲಿ . ನನ್ನ ಮನವು ನಲಿದಿದೆ ಈ ಖುಷಿಯಲಿ ... ನೀನೆಂದೂ ಇರುವೆ ನನ್ನ ಕನಸಲಿ ನಮ್ಮ ಪ್ರೀತಿಯ ಬೆಸುಗೆ ಈ ಮಳೆಯಲಿ ... ಚಂದಿರನೆ ಸಾಕ್ಷಿ ಈ ಇರುಳಲಿ . ** ಈ ಸಾಲುಗಳನ್ನು ಬರೆಯಲು ನನಗೆ ಸಲಹೆಯನ್ನಿತ್ತ ನನ್ನ ಗೆಳತಿಗೆ ಅರ್ಪಣೆ.
ಪುಟ್ಟ ಸಾಲುಗಳಲ್ಲಿ ಪುಟಗಟ್ಟಲೇ ಬರೆಯೋ ತರಹದ ಭಾವಗಳ ರವಾನಿಸೋ ಚಂದದ ಪದಗಳು.
ReplyDeletenicely presented ..Liked :)
ಪುಟ್ಟ ಸಂದೇಶದಲ್ಲಿ, "ಭಾವನೆ"ಗೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು :)
Delete