Skip to main content

Posts

|| ಹರ ಹರ ಕೇದಾರನಾಥ ||

ಮಸಣವೊಂದು ಊರ ನಡುವೆ ಶಿವನ ನೆಲೆಯೂ, ದೈವ ಕೃಪೆಯಿದ್ದಂತೆ ಶಿವನಿಚ್ಛೆಯೋ....???? ನೆಲೆಸಿಲ್ಲ ಜಗದೊಳು, ಮಸಣವಿಲ್ಲದೆಡೆ ಭಕ್ತರ ಸಲಹುವಲಿ ಶಿವನರಸಿಹೊರಟು ಧ್ಯಾನದಲಿರುವಾಗ ಮುಕ್ಕಣ್ಣ ತೆರೆದು, ಜಗವ ಮಸಣವ ಮಾಡಿದೆ ನೀನು ಹರ ಹರ ಕೇದಾರನಾಥ

ಮೌನ..??

ನೀರವ ಮೌನವೋ ಈ ಜಗ ಬರಿದಾಗಿ ಕವಿಯಿತೋ ಕಾರ್ಮೋಡ.. ಬತ್ತಿದ ಬಾನಲಿ ಹನಿಯ ಉಗಮ ಭೂ ಕಾವಿನ ಆವಿಯಲಿ ಖಗ ಮೃಗ ಜಲ-ಚರ ಬದುಕಿನ ಓಟದಿ ಉದರ ಧಗೆಯಲ್ಲೀ.. ಮನುಜನ ವಾಸವೋ ನೆತ್ತರು ಬರಿದಾಗಿ ಸುಡು ನೆತ್ತಿಯ ನೆರಳಲ್ಲಿ ನಗುವೋ ಅಳುವೋ ಹೊತ್ತಿದ ದಾಹದಿ ಕರುಳಿಗೆ ಸಾಂತ್ವಾನ.. ಈ ಜನ-ಮನದಲಿ ವಿಧಿಯ ನೆರಳಲಿ, ಬಾಳು ನರಕವು ಭೂ ತಾಯಿಯ ಮಡಿಲಲ್ಲಿ.

ಮಾಸಿದ ನಗೆಯು..

ಮಾಸಿದ ನಗೆಯು ಕಣ್ಣಿನಾಳದ ಕಡು ಕಲ್ಲಿನಡಿಯಲ್ಲಿ ಬತ್ತಿದ ಜಲತೀರದ ಮರಳ ಧಗೆಯಲ್ಲಿ ಉರಿದುರಿದು ಕೆಂಪಾಗಿ ಇಳಿ ಸಂಜೆಯ ತಿಳಿ ನೆರಳಿನಲ್ಲಿ ಕಾರ್ಮೋಡ ಎಬ್ಬಿಸಿತು ಮುಖ ಚಂದಿರದಲ್ಲಿ...

ಮನಸು..

ಹುಚ್ಚು ಕುದುರೆಯಂತಹ ಮನಸ್ಸು.  ಭಾವನೆಗಳಿಗೆ ನಿಖರತೆಯಿಲ್ಲ.  ತನಗಾಗಿ ಹಂಬಲಿಸುವ ಮನಸ್ಸಿನ ಹುಡುಕಾಟದಲಿ ಅಲೆಯುತ್ತಿದೆ...,  ಅಲೆದು ಸೋಲುತ್ತಿದೆ...!!??   ಹುಚ್ಚು ಮನಸು, ನೂರು ಕನಸು. ಅಲೆದಾಟವೊಂದೇ..! ದಾರಿ ಗೊತ್ತಿಲ್ಲ, ಗುರಿ ಇಟ್ಟಿಲ್ಲ. ಪರ್ಯಟನೆಯೊಂದೇ..! ಮಾತನಾಡಿಲ್ಲ, ಮನಸು ಸಿಕ್ಕಿಲ್ಲ. ಮೌನವೊಂದೇ..! ಪರಿಚಯವಿಲ್ಲ, ಸ್ನೇಹವಿಲ್ಲ. ಹುಡುಕಾಟವೊಂದೇ..!!

ಶುಭಾಷಯ....

ನೀ..

ನೀ ಕಾಣದಾದೆ ಇಂದು ಮನವೆಲ್ಲ ಕಾದಿದೆ. ನೀ ದೂರ ಹೋದೆಯೆಂದು ಮನದಲ್ಲಿ ನೋವಿದೆ. ಈ ಮನಸಿನಾ ನೋವು ನೀ ತಿಳಿಯದಾದೆಯಾ ? ಗೆಳತಿ, ಮನವೇಕೆ ಕೊಟ್ಟೆ ನೀನು ಈ ಪ್ರೀತಿ ಚಿಗುರಲು ...??
" ಯಾವ ಘಳಿಗೆಯು ನನ್ನ ಮನಸ್ಸನ್ನು ಮುದಗೊಳಿಸುತ್ತದೆಯೋ, ಆ ಸಮಯವೇ ನನಗೆ ಸ್ಪೂರ್ತಿ..! ಯಾವ ಘಳಿಗೆಯು ನನ್ನ ಕಷ್ಟಗಳನ್ನು ಎದುರಿಸುತ್ತದೆಯೋ, ಆ ಸಮಯವೇ ನನಗೆ ಗುರು..! ಯಾವ ಘಳಿಗೆಯು ಇನ್ನೊಬ್ಬರ ಸಜ್ಜನಿಕೆಯನ್ನು ತಿಳಿಸುತ್ತದೆಯೋ, ಆ ಸಮಯವೇ ನನಗೆ ಪಾಠ..! ಯಾವ ಘಳಿಗೆಯು ಇನ್ನೊಂದು ಮನಸ್ಸಿನ ಭಾವನೆಗಳಿಗೆ ಸ್ಪಂದಿಸಲು ಸಹಕರಿಸುತ್ತದೋ, ಆ ಸಮಯವೇ ನನಗೆ ಧ್ಯಾನ..! ಯಾವ ಘಳಿಗೆಯು ನನ್ನವರನ್ನು ನೆನೆಯಲು ಸಹಕರಿಸುತ್ತದೋ, ಆ ಸಮಯವೇ ನನಗೆ ನೆಮ್ಮದಿ..! ಯಾವ ಘಳಿಗೆಯು ನನ್ನ ಕಷ್ಟಗಳಿಗೆ ಸ್ಪಂದಿಸುತ್ತದೆಯೋ, ಆ ಸಮಯವೇ ನನಗೆ ವಿಶ್ರಾಂತಿ..! "