Skip to main content

Posts

ಇನಿಯನ ನೆನಪು

ಚುಂಬನದ ಸಿಹಿ..

                                         ನಿನ್ನ ಚುಂಬನದ ಸಿಹಿಯ,                                                     ನಾ ಹೇಗೆ ಬಣ್ಣಿಸಲಿ?                                          ಆಧಾರವಿಲ್ಲವಷ್ಟೆ..                        ...

ಗುರುತು

ಕಳೆದಿದೆ ನಿನ್ನ ಗುರುತು ಹುಡುಕಲಾಗದೇ ನೆನಪಲಿ ಮತ್ತೆ ಮತ್ತೆ ಮರುಕಳಿಸಿತು ನೆನಪಾಗದ ಈ ಸಮಯದಲಿ ಕೊಂಚವೂ ಸುಳಿವು ಸಿಗುತಿಲ್ಲ ನಿನ್ನ ಭೇಟಿಯ ಚಿತ್ರಣ ಸ್ಥಳವೂ ಅಪರಿಚಿತವಾಗಿಸಿತಲ್ಲ ಗುರುತು, ಪರಿಚಯದ ಮಿಶ್ರಣ ನೀ ಬಂದರೆ ಪರಿಚಯ ಸಿಗಬಹುದೇ? ನನಗೆ ಕಣ್ಣೀರ ಹನಿಯ ಅಳುವಲಿ ಇಷ್ಟಾದರೂ ತಿಳಿಯಬಹುದೇ? ನಿನಗೆ ನಾ ಬದುಕಿರುವುದು ನಿನ್ನದೇ ಅಸ್ಪಷ್ಟ ನೆನಪಲಿ

ತೆರೆಯ ಅಲೆಗಳೊಂದಿಗೆ ಹೆಜ್ಜೆ..

ತೆರೆಯ ಅಲೆಗಳೊಂದಿಗೆ, ನಿನ್ನ ಹೆಜ್ಜೆ ಹುಡುಕುತ ಅಳಿಸುವ ಮೊದಲು ಕಾಲನಿಡಲು, ಈ ಮನದ ಆತುರ ಸಹಕರಿಸುವೆಯಾ, ಒಂದೇ ಹೆಜ್ಜೆಯನಿಡಲು ನಿನ್ನ ಕಾಲನು ನನ್ನ ಕಾಲಿನಮೇಲಿಟ್ಟು . . .

ಗುರುವೇ..

                                      ಗುರುವೇ,                                       ನೀ ತೋರಿದಾ ಹಾದಿಯಲಿ ಹೊರಟಿಹೆನು ನಾನು                                         ಪಥದ ಅರಿವಿಲ್ಲ, ಸೂತ್ರದಾರ ಜೊತೆಗಿಲ್ಲ                                         ನಿನ್ನ ದಿವ್ಯದೃಷ್ಟಿಯಲ್ಲಿ ನಂಬಿಕೆಯೇ ಎಲ್ಲ                                         ಮುನ್ನಡೆಸು ನನ್ನ ಬೆಳಕಿನೆಡೆಗೆ..

ಓಲೆ

ನಿನ್ನ ಓಲೆಯ ಕದಲುವಿಕೆ ನನ್ನನ್ನೇ ಕರೆಯುವಂತಿದೆ ಮಾತಿನ ತಾಳಕ್ಕೆ ಮೌನದ ಉತ್ತರವಾಗಿ

ಪಯಣ

ಕಲ್ಪನೆಗಳೊಂದಿಗೆ, ಕನಸಿನ ಲೋಕದಲ್ಲಿ ನಾವಿಕನ ಪಯಣ .. ನಾಯಕಿಯ ಹುಡುಕಾಟದಲ್ಲಿ !!!!

ನಗೆಗೆ ನಾಚಿದ್ದು..

ಬಸ್ಸಿನಲ್ಲಿ ಎದುರು ಕುಳಿತ ಹುಡುಗಿಯ ನಗೆಗೆ ನಾಚಿದ್ದು, ಅನಿಸಿಕೆಯ ಅಲೆಗಳೊಂದಿಗೆ ..!! ನೋಡಿದರೂ ನೋಡದಂತೆ ಇತ್ತ ನೋಡುತ್ತಿರುವ ಅವಳು ನನ್ನ ನೋಡುತ್ತಿರುವಳೇ ..?? ರಸ್ತೆಯ ದಿಬ್ಬದ ಏರಿಳತಕ್ಕೆ ಬಸ್ಸಿನಲ್ಲಿ ಕುಳಿತ ನೀನು, ತಲೆ ತೂಗುವುದು ನನ್ನ ಅನಿಸಿಕೆಗಳಿಗೆ ಒಪ್ಪಿಗೆಯೇ ..?? ನಿನ್ನ ತುಟಿಯಲ್ಲಿನ ಮಾತು ನಾ ನಿಜವಾಗಿಯೂ ಕೇಳದಾದೆ ನಗುವಿನ ಅಲೆಯೊಂದನ್ನು ಬಿಟ್ಟು.. ನಿನ್ನ ಮುಂಗುರುಳಾದರೂ ನಾನಾಗಬಾರದಿತ್ತೇ ಮತ್ತೆ ಮತ್ತೆ ನಿನ್ನ ಕೆನ್ನೆಗೆ ಮುದ್ದಿಸಲು..

ಭಾವನೆ

ಭಾವನೆಗಳ ಮಾತಿಗೆ ಬಣ್ಣ ಹಚ್ಚುವ ಆಸೆ ಅನುದಿನವೂ ನೆನೆದ ಕನಸಿಗೆ.. ಕಣ್ಣ ರೆಪ್ಪೆಗೆ ಹಚ್ಚಿದ ಕಾಡಿಗೆಯಿಂದ ಬೊಟ್ಟೊಂದನಿಡುವೆಯಾ ನಮ್ಮೀ ಪ್ರೀತಿಯ ಪುಟದಂಚಲಿ, ಹೆಜ್ಜೆ ಜೊತೆಯಿಡುವ ಮುನ್ನ!!!!

ಪ್ರೀತಿಯ ಸೆಳೆತಕ್ಕೆ ಸಿಕ್ಕಾಗ..,,

    ಅದ್ಯಾವ ಘಳಿಗೆಯಲ್ಲಿ ಪರಿಚಯವಾದೆಯೋ..??     ಆ ಪರಿಚಯ ಇಂದು ಏಕಮುಖ ಪ್ರೀತಿಯಾಗಿದೆ..!!     ಹೌದು, ನೀನು ಸಿಕ್ಕಾಗ ನನಗೆ ಕೇವಲ ಪರಿಚಿತಳಾಗಿದ್ದೆ. ನಿನ್ನ ನಗುವೊಂದನ್ನು ನಾನು ಕೇವಲ ಬಯಸಿದ್ದೆ. ನನ್ನ ಗುಣ ನನಗೆ ಹೊಸತಲ್ಲ. ಪರಿಚಯವಾದ ಹುಡುಗಿಯ ಮುಖದಲ್ಲಿ ನಗು ಮೂಡಿಸಿ, ನಾನೂ ನಗುವುದು ನನ್ನ ಅಭ್ಯಾಸ. ಇದು ನನ್ನ ಬಲಹೀನತೆಯಲ್ಲ. ದಯವಿಟ್ಟು ಹಂಗಿಸಿ ನಗಬೇಡ, ಆ ನಗುವನ್ನು ಎಂದಿಗೂ ನಾನು ಬಯಸಿಲ್ಲ. ನಿನ್ನ ಗುಣವನ್ನು ನಾನು ಎಷ್ಟೇ ಅರಿಯಲಿಚ್ಚಿಸಿದರೂ, ಇನ್ನೂ ಅರಿಯಲಾಗಲಿಲ್ಲ. ಅದ್ಯಾಕೋ ನಿನ್ನ ಜೊತೆಯಲ್ಲಿರುವಷ್ಟು ಸಮಯ ನನ್ನ ಮನಸ್ಸು ಶುಭ್ರವಾಗಿರುತ್ತದೆ. ಏನೆಲ್ಲ ಮಾತಾಡಬೇಕೆಂದು ಬರುವೆ, ಆದರೆ ನಿನ್ನ ನೋಡಿದಾಕ್ಷಣ ಕೇವಲ ನಗೆಯಲ್ಲಿನ ಮಾತು ಎಲ್ಲವನ್ನೂ ಮರೆಸಿಬಿಡುತ್ತದೆ. ನಿನ್ನ ಮಾತಿಗೆ ಕೇವಲ ಪ್ರತ್ಯುತ್ತರಗಾರನಾಗಿರುತ್ತೇನೆ ಏಕೋ ತಿಳಿಯೆ. ನನಗನ್ನಿಸಿದ ಹಾಗೆ ಇದು ಪ್ರೀತಿಯಲ್ಲ. ಆದರೆ ಇದು ಆಕರ್ಷಣೆಗಿಂತ ಮಿಗಿಲು. ಒಂದು ತರದಲ್ಲಿ ಪ್ರೀತಿಯೇ ಅಂದಿಟ್ಟುಕೊಳ್ಳೋಣ. ನೀನು ನಿಜವಾಗಿಯೂ ಯಾವ ಬದಲಾವಣೆಯನ್ನೂ ಕಂಡಿಲ್ಲವಾ ನನ್ನಲ್ಲಿ?     ನೀನು ಸಿಕ್ಕ ಆ ದಿನ ಒಂದು ಮಾತಿನಲ್ಲಿ ಮುಗಿಸಿದ್ದೆ ನಿನ್ನ ಹೆಸರು ಕೇಳಿ. ನೆನಪಿಲ್ಲವಾ ನಿನಗೆ ? ನನ್ನ ಹೆಸರನ್ನು ಹೇಳಿರಲಿಲ್ಲ. ನೀನು ಕೇಳಿದ್ದು ಇನ್ನೊಂದು ಭೇಟಿಯಲ್ಲಿ. ಮಾತು ಶುರುವಾಗಿದ್ದೇ ಹಾಗೆ!! ಹೀಗೆ ...

ಬದುಕು

ಬದುಕು, ನೀರ ಮೇಲಿನ ದೋಣಿಯಂತೆ ಹುಟ್ಟು ಹಾಕುವವನ ರಟ್ಟೆ ಗಟ್ಟಿಗಿರಬೇಕಷ್ಟೆ!!!!

ಪಾರಿಜಾತಾ...

ದಾರಿಯಲೊಮ್ಮೆ, ಒಮ್ಮೆ ದಾರಿಯಲೊಮ್ಮೆ ಸಿಕ್ಕಿಬಿಟ್ಲು ಜಾತಾ ಜಾತ ಪಾರಿಜಾತಾ ! ನಿನ್ನ ಹೂವನಡಿಗೆ, ನಡಿಗೆ ನಿನ್ನ ಹೂವನಡಿಗೆಯಿಂದೇ ಹೃದಯ ಘಾತ ಜಾತ ಪಾರಿಜಾತಾ ! ವಯಸಿನಿಂದ ಬಂದೆ ಮನಸು ಮಾತ್ರ ನಂದೆ ಮನಸು ಕೊಡಲೆಂದೇ ನಿನಮನೆ ಬಳಿಬಂದೆ ನಿನ್ನ ಮನಸು ಕೊಟ್ಟುಹೋಗೆ ಜಾತಾ, ಜಾತ ಪಾರಿಜಾತಾ ! ಮೈಸೂರ್ ಮಲ್ಲಿಗೆ ತಂದೆ ಸೆಂಟು ಗಿಂಟು ನಿಂದೆ Colour ಚೂಡಿದಾರ ಒಂದೇ ಹಾಕ್ಕೊಂಬಿಡು ಬಂದೆ ದುಡ್ಡು ಗಿಡ್ಡು ಕಟ್ಕೊಂಬಾರೆ ಜಾತಾ, ಜಾತ ಪಾರಿಜಾತಾ ! ಕಲರ್ TV ತಂದೆ ಕಲರ್ Filmi ಗೆಂದೇ ವರ್ಷ ಪೂರ್ತಿ ಬಂದೆ ನಿನಗೋಸ್ಕರ ಹಿಂದೇ ಹಳೆ ಚಪ್ಲೀಲ್ ಹೊಡಿಬೇಡ ಜಾತಾ, ಜಾತ ಪಾರಿಜಾತಾ !

ಕಣ್ಣೀರ ಹನಿ

ಮರೆತೆ ಮಾತೊಂದ ಹೇಳುವುದು ನೀನು ಸಿಕ್ಕಾಗ ಕಣ್ಣೀರ ಸುಳಿವು, ಬಾಡಿದ ಮುಖದಲ್ಲಿ ಇನ್ನೂ ಬಳಿಬಂದು ಹೇಳುವ ಅಭಿಲಾಷೆ ಭಯವೋ....?? ನಂಬಿಕೆ....!! ನೀನು ತಿರಸ್ಕರಿಸಳಾರೆ. ಮಾತಿಗಾದರೂ ಸಿಗು ಎಂದೆಂದೂ ಬಹುದೂರದ ಪಯಣದಿ. ನೀನಾರೋ..?? ಗೆಳತಿಯೋ..?? ಪ್ರೇಯಸಿಯೋ..?? ಗೊತ್ತಿಲ್ಲ ನಿನ್ನ ಇರುವಿಕೆ ಮನಕೆ ಆದರೂ, ಮನ ಕದಲಿದೆ. ಕಣ್ಣೀರ ಹನಿಯೋ....,, ಬರೆದ ಅಕ್ಷರಗಳ ನಡುವೆ....

ಸನಿಹ ಬಯಸಿ

ದುಃಖಿತನಾಗಿ ಬಂದೆ ನಿನ್ನ ಸನಿಹ ಬಯಸಿ, ಸಂತೈಸುವಿಯೆಂದು ನಿನ್ನ ಸನಿಹವೋ..?? ಉಲ್ಬಣಿಸಿತು ದುಃಖ ನೀ ಅರಿಯಲಾರಳೆಂದು. ಬಂಧನದ ನಡುವೆ ಬಿರುಕಿನ ಸೂಚನೆ ನಾ ತಿರಸ್ಕರಿಸಲೇ..?? ಉಸಿರು ಚಲಿಸದು ಮುಂದೆ ನೀ ಅರಿತು ಅಪ್ಪುವೆಯಾ..??

ಪ್ರೀತಿ..!!

ಪ್ರೀತಿ ಹೇಳಲು ತುಡಿಯುವ ಮನಸ್ಸಿಗೆ ಪದಗಳಿಲ್ಲ ಗೆಳತಿ , ಕಣ್ಣ ಸನ್ನೆಯ ಹೊರತಾಗಿ .. ನಿನ್ನ ಕಣ್ಣಂಚಿನ ಪ್ರಭೆಯೋ , ಕರಗಿ ಹೋಗಿರುವೆ ಮನಸಾರೆ .. ಸಮ್ಮತಿಸು ಈ ಮನಸಿಗೆ ಆ ನಿನ್ನ ಕಣ್ಣ ರೆಪ್ಪೆಯ ಬಡಿದು ..!!!!

|| ಹರ ಹರ ಕೇದಾರನಾಥ ||

ಮಸಣವೊಂದು ಊರ ನಡುವೆ ಶಿವನ ನೆಲೆಯೂ, ದೈವ ಕೃಪೆಯಿದ್ದಂತೆ ಶಿವನಿಚ್ಛೆಯೋ....???? ನೆಲೆಸಿಲ್ಲ ಜಗದೊಳು, ಮಸಣವಿಲ್ಲದೆಡೆ ಭಕ್ತರ ಸಲಹುವಲಿ ಶಿವನರಸಿಹೊರಟು ಧ್ಯಾನದಲಿರುವಾಗ ಮುಕ್ಕಣ್ಣ ತೆರೆದು, ಜಗವ ಮಸಣವ ಮಾಡಿದೆ ನೀನು ಹರ ಹರ ಕೇದಾರನಾಥ

ಮೌನ..??

ನೀರವ ಮೌನವೋ ಈ ಜಗ ಬರಿದಾಗಿ ಕವಿಯಿತೋ ಕಾರ್ಮೋಡ.. ಬತ್ತಿದ ಬಾನಲಿ ಹನಿಯ ಉಗಮ ಭೂ ಕಾವಿನ ಆವಿಯಲಿ ಖಗ ಮೃಗ ಜಲ-ಚರ ಬದುಕಿನ ಓಟದಿ ಉದರ ಧಗೆಯಲ್ಲೀ.. ಮನುಜನ ವಾಸವೋ ನೆತ್ತರು ಬರಿದಾಗಿ ಸುಡು ನೆತ್ತಿಯ ನೆರಳಲ್ಲಿ ನಗುವೋ ಅಳುವೋ ಹೊತ್ತಿದ ದಾಹದಿ ಕರುಳಿಗೆ ಸಾಂತ್ವಾನ.. ಈ ಜನ-ಮನದಲಿ ವಿಧಿಯ ನೆರಳಲಿ, ಬಾಳು ನರಕವು ಭೂ ತಾಯಿಯ ಮಡಿಲಲ್ಲಿ.