ಆ ದಿನ ದೀಪಾವಳಿ. ನೆರೆ-ಹೊರೆಯವರೆಲ್ಲ ತಮ್ಮ ತಮ್ಮ ಮಕ್ಕಳ ಜೊತೆ ದೀಪಾವಳಿಯನ್ನು ಸಂಭ್ರಮಿಸುತ್ತಿದ್ದಾರೆ. ಆ ಲಗು-ಬಗೆ, ತಾನೇ ಎಲ್ಲ ಕೆಲಸ ಮಾಡಬೇಕೆಂಬ ಕಿತ್ತಾಟ, ಆ ಕಿತ್ತಾಟದೊಳಗಿನ ಚಿಕ್ಕ ಸಂತೋಷ ಇವನ್ನೆಲ್ಲ ನೋಡುತ್ತ ಅದೆಷ್ಟೋ ದೀಪಾವಳಿಯನ್ನು ಕಳೆದಿದ್ದಳು ಸರೋಜ. ತನ್ನ ಮಗನೊಂದಿಗೆ ಯಾವತ್ತು ಈ ರೀತಿ ಸಂಭ್ರಮಿಸುತ್ತೇನೋ ಎಂದು ಹಂಬಲಿಸಿ, ಆ ಸಂತೋಷದ ದಿನಕ್ಕಾಗಿ ಕಾಯುತ್ತ ಕುಳಿತಿದ್ದಳು. ತನ್ನ ಮಗ ಪಟ್ಟಣಕ್ಕೆ ಓದಲು ಹೋದವನು ಈ ಬಡ ತಂದೆ-ತಾಯಿಯನ್ನು ಮರೆತು ಹೋದುದನ್ನು ಮತ್ತೆ ಮತ್ತೆ ನೆನೆಸಿಕೊಳ್ಳುತ್ತ ತನ್ನಲ್ಲೇ ದುಃಖಿಸುತ್ತಿದ್ದಳು. ದಿನ ಕಳೆಯುವುದರೊಳಗೆ ತನ್ನ ಗಂಡ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನೋಡಿದ ಸರೋಜಳು ಕಲ್ಲೂ ಸಹ ಕರಗುವಂತೆ ರೋದಿಸತೊಡಗಿದಳು. ಅವಳ ಅಳುವಿಗೆ ಕೊನೆಯೇ ಇಲ್ಲದಂತೆ ಕಾಣುತ್ತಿತ್ತು. ತನ್ನ ಸರ್ವಸ್ವವನ್ನೂ ಕಳೆದುಕೊಂಡೆನೆಂದು ಚೀತ್ಕರಿಸುತ್ತಿದ್ದಳು. ತನ್ನ ಮಗನು ಈ ಸಮಯದಲ್ಲಾದರೂ ಬಂದಿದ್ದರೆ ತಂದೆಯ ಅಂತ್ಯಸಂಸ್ಕಾರ ಮಾಡಬಹುದಿತ್ತೆಂದು ಅವನ ದಾರಿಯನ್ನೇ ಕಾಯುತ್ತಾ ಗೋಗರೆಯುತ್ತಿದ್ದಳು. ನೆರೆಹೊರೆಯವರು ಎಷ್ಟೇ ಸಮಾಧಾನಿಸಿದರೂ ಅವಳು ಕೇಳುವ ಸ್ಥಿತಿಯಲ್ಲಿರಲಿಲ್ಲ. ಕೊನೆಗೆ ಊರಿನವರೇ ಸೇರಿ ಎಲ್ಲ ಮುಗಿಸಿದುದನ್ನು ನೋಡಿ...
ಕನಸಿನ ಲೋಕದಲ್ಲಿ..