ಹುಚ್ಚು ಕುದುರೆಯಂತಹ ಮನಸ್ಸು. ಭಾವನೆಗಳಿಗೆ ನಿಖರತೆಯಿಲ್ಲ. ತನಗಾಗಿ ಹಂಬಲಿಸುವ ಮನಸ್ಸಿನ ಹುಡುಕಾಟದಲಿ ಅಲೆಯುತ್ತಿದೆ..., ಅಲೆದು ಸೋಲುತ್ತಿದೆ...!!?? ಹುಚ್ಚು ಮನಸು, ನೂರು ಕನಸು. ಅಲೆದಾಟವೊಂದೇ..! ದಾರಿ ಗೊತ್ತಿಲ್ಲ, ಗುರಿ ಇಟ್ಟಿಲ್ಲ. ಪರ್ಯಟನೆಯೊಂದೇ..! ಮಾತನಾಡಿಲ್ಲ, ಮನಸು ಸಿಕ್ಕಿಲ್ಲ. ಮೌನವೊಂದೇ..! ಪರಿಚಯವಿಲ್ಲ, ಸ್ನೇಹವಿಲ್ಲ. ಹುಡುಕಾಟವೊಂದೇ..!!