ಹುಚ್ಚು ಕುದುರೆಯಂತಹ ಮನಸ್ಸು. ಭಾವನೆಗಳಿಗೆ ನಿಖರತೆಯಿಲ್ಲ. ತನಗಾಗಿ ಹಂಬಲಿಸುವ ಮನಸ್ಸಿನ ಹುಡುಕಾಟದಲಿ ಅಲೆಯುತ್ತಿದೆ..., ಅಲೆದು ಸೋಲುತ್ತಿದೆ...!!??
ಹುಚ್ಚು ಮನಸು, ನೂರು ಕನಸು. ಅಲೆದಾಟವೊಂದೇ..!
ದಾರಿ ಗೊತ್ತಿಲ್ಲ, ಗುರಿ ಇಟ್ಟಿಲ್ಲ. ಪರ್ಯಟನೆಯೊಂದೇ..!
ಮಾತನಾಡಿಲ್ಲ, ಮನಸು ಸಿಕ್ಕಿಲ್ಲ. ಮೌನವೊಂದೇ..!
ಪರಿಚಯವಿಲ್ಲ, ಸ್ನೇಹವಿಲ್ಲ. ಹುಡುಕಾಟವೊಂದೇ..!!
Comments
Post a Comment