Skip to main content

ಚುಂಬನದ ಸಿಹಿ..


                                         ನಿನ್ನ ಚುಂಬನದ ಸಿಹಿಯ,           
                                         ನಾ ಹೇಗೆ ಬಣ್ಣಿಸಲಿ?
                                         ಆಧಾರವಿಲ್ಲವಷ್ಟೆ..
                                         ಹೇಳಬೇಕೆಂದರೆ, ನಾನಿರುವೆನು
                                         ಮರುಚುಂಬನದ ಆಸೆಯಲ್ಲಿ,
                                         ಅಧರಾಮೃತದ ನಶೆಯಲ್ಲಿ..

Comments

Post a Comment

Popular posts from this blog

ಹೀಗೊಂದು ಪ್ರೇಮ ಪತ್ರ..,,

ನಿನ್ನ ನಗು ನನ್ನ ಕಣ್ಣಂಚಲಿ ನಿನ್ನ ಮಾತು ನನ್ನ ಮನದಾಳದಿ ನಿನ್ನ ನೆನಪೊಂದೆ ಸಾಕು ನನ್ನ ಈ ಜೀವಕೆ ನಿನ್ನ ಮನಸೊಮ್ಮೆ ಕೊಡು ನನ್ನ ಈ ಪ್ರೀತಿಗೆ ! ನಿನ್ನ ಕಂಡಾಕ್ಷಣ ಪ್ರೀತಿ ಚಿಗುರೊಡೆಯಿತು ಮನದ ಆ ಕಂಪನ ನಿನಗೆ ತಿಳಿಯದೇ ಹೋಯಿತು..! ಮೌನ ನೋವಿಗೆ ಕಾರಣ ಹೃದಯ ನಗುವಿಗೆ ಕಾತುರ ನಿನ್ನ ಕನಸಿಗೆ ನಾನು ಹೆಗಲಾಗುವೆ ನನ್ನ ಪ್ರೀತಿಯ ನೀನು ಸ್ವೀಕರಿಸು ಬಾ..!

ಕರೆಯದ ಮದುವೆಗೆ ಗೀತೆಯೊಂದು ಉಡುಗೊರೆ...

            ಈ ಹುಡುಗೀರೇ ಹೀಗಾ ? ಅವರ ಹೃದಯದಲ್ಲಿ ಸ್ನೇಹ ಎಂಬುದಕ್ಕೆ ಜಾಗವಿಲ್ಲವಾ !? ಅಥವಾ ಸ್ನೇಹ ಅವರಿಗೇ ಇಷ್ಟವಿರುವುದಿಲ್ಲವೋ ನಾತಿಳಿಯೆ. ನನ್ನ ಬಾಲ್ಯದ ಸ್ನೇಹಿತರೆಲ್ಲರೂ ಹೀಗೆ ಅನ್ನಿಸುತ್ತದೆ. ಅವರೆಲ್ಲರೂ ಆ ದಿನಗಳನ್ನು ಬಹುಷಃ ಮರೆತೇ ಬಿಟ್ಟಿರಬೇಕು ಅಥವಾ ನಂತರದ ದಿನಗಳಲ್ಲಿ ಅವರಿಗೆ ನೆನಪಿಸಿಕೊಳ್ಳಲು ಸಾಧ್ಯವಾಗಲಿಲ್ಲವಾ ? ಅದೇನೋ ನಾ ತಿಳಿಯೆ. ಈ ವೈಜ್ಞಾನಿಕ ಯುಗದಲ್ಲಿ ಅಪರಿಚಿತರೇ ಪರಿಚಿತರಾಗುವ ಸಮಯದಲ್ಲಿ, ಪರಿಚಿತರನ್ನು ಹುಡುಕುವುದು ನನಗೂ ಕಷ್ಟವಾಯಿತು. ಅದೇನೇ ಆಗಲಿ, ಅವರಿಗೆ ನನ್ನ ಪರಿಚಯವಿಲ್ಲವೋ, ನನ್ನ ಪರಿಚಯದ ನೆನೆಪಿದೆಯೋ ನಾ ಅರಿಯೆ. ಈ ಸಂದರ್ಭದಲ್ಲಿ ನನಗೆ ತಿಳಿಯಲ್ಪಟ್ಟಂತೆ ನನ್ನ ಸ್ನೇಹಿತೆಯೊಬ್ಬಳು ವಿವಾಹವಾಗುತ್ತಿದ್ದಾಳೆ. ನನ್ನನ್ನು ವಿವಾಹಕ್ಕೆ ಆಮಂತ್ರಿಸದಿರುವುದಕ್ಕೆ ನನಗೇನೂ ಬೇಸರವಿಲ್ಲ. ಆದರೆ ಅವಳಿಗೆ ವಿವಾಹ ಶುಭ ಕೋರದಿದ್ದರೆ ಆ ಗೆಳೆತನ ಸಾರ್ಥಕವಾಗಲಾರದು. ಹಾಗಾಗಿ ಅವಳಿಗೆ ಶುಭಕೋರುತ್ತ ಈ ಗೀತೆಯನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ.   ಹೇ ಗೆಳತೀ..,  ನೀ ಮರೆತು ಹೋದೆಯಾ  ನಮ್ಮ ಆ ದಿನದ ಸ್ನೇಹವಾ ಮಾತು ಮೌನವಾಯಿತು    ನೆನಪು ನೀ ಅಳಿಸಿಬಿಟ್ಟೆಯಾ ಸ್ನೇಹ ನೆನಪಿಲ್ಲವೇ ನಿನಗೆ, ಈ ಸ್ನೇಹ ಭಾರವೇ ಮತ್ತೆ, ಅದೇಕೆ ನಾಚಿಕೆ ನಮ್ಮ ಈ ಸ್ನೇಹ ಬೆಸುಗೆಗೆ ಮನವು ನಲಿದಾಡಿತು ನಿನ್ನ ಆ ಸ್ನೇಹದ ...