Skip to main content

|| ಹರ ಹರ ಕೇದಾರನಾಥ ||

ಮಸಣವೊಂದು ಊರ ನಡುವೆ
ಶಿವನ ನೆಲೆಯೂ,
ದೈವ ಕೃಪೆಯಿದ್ದಂತೆ

ಶಿವನಿಚ್ಛೆಯೋ....????
ನೆಲೆಸಿಲ್ಲ ಜಗದೊಳು, ಮಸಣವಿಲ್ಲದೆಡೆ
ಭಕ್ತರ ಸಲಹುವಲಿ

ಶಿವನರಸಿಹೊರಟು ಧ್ಯಾನದಲಿರುವಾಗ
ಮುಕ್ಕಣ್ಣ ತೆರೆದು, ಜಗವ
ಮಸಣವ ಮಾಡಿದೆ ನೀನು
ಹರ ಹರ ಕೇದಾರನಾಥ

Comments

  1. ತನ್ನ ನೆಲೆಯನ್ನೇ ಮಸಣ ಮಾಡಿಡುವುದು ತರವೇ ಹರನೇ?
    http://badari-poems.blogspot.in

    ReplyDelete
    Replies
    1. ಬದ್ರಿನಾಥನು ಶಾಂತಿಯಿಂದ ಹರಸಿದರೆ,
      ಕೇದಾರನಾಥ ಕೋಪದಿ ಕುಣಿದಾಡಿದನು.
      ಎಲ್ಲವೂ ಶಿವನಿಚ್ಚೆ!!!!

      Delete

Post a Comment

Popular posts from this blog

ಚುಂಬನದ ಸಿಹಿ..

                                         ನಿನ್ನ ಚುಂಬನದ ಸಿಹಿಯ,                                                     ನಾ ಹೇಗೆ ಬಣ್ಣಿಸಲಿ?                                          ಆಧಾರವಿಲ್ಲವಷ್ಟೆ..                                          ಹೇಳಬೇಕೆಂದರೆ, ನಾನಿರುವೆನು                                          ಮರುಚುಂಬನದ ಆಸೆಯಲ್ಲಿ,                                          ಅಧರಾಮೃತದ ನಶೆಯಲ್ಲಿ..

ಕರೆಯದ ಮದುವೆಗೆ ಗೀತೆಯೊಂದು ಉಡುಗೊರೆ...

            ಈ ಹುಡುಗೀರೇ ಹೀಗಾ ? ಅವರ ಹೃದಯದಲ್ಲಿ ಸ್ನೇಹ ಎಂಬುದಕ್ಕೆ ಜಾಗವಿಲ್ಲವಾ !? ಅಥವಾ ಸ್ನೇಹ ಅವರಿಗೇ ಇಷ್ಟವಿರುವುದಿಲ್ಲವೋ ನಾತಿಳಿಯೆ. ನನ್ನ ಬಾಲ್ಯದ ಸ್ನೇಹಿತರೆಲ್ಲರೂ ಹೀಗೆ ಅನ್ನಿಸುತ್ತದೆ. ಅವರೆಲ್ಲರೂ ಆ ದಿನಗಳನ್ನು ಬಹುಷಃ ಮರೆತೇ ಬಿಟ್ಟಿರಬೇಕು ಅಥವಾ ನಂತರದ ದಿನಗಳಲ್ಲಿ ಅವರಿಗೆ ನೆನಪಿಸಿಕೊಳ್ಳಲು ಸಾಧ್ಯವಾಗಲಿಲ್ಲವಾ ? ಅದೇನೋ ನಾ ತಿಳಿಯೆ. ಈ ವೈಜ್ಞಾನಿಕ ಯುಗದಲ್ಲಿ ಅಪರಿಚಿತರೇ ಪರಿಚಿತರಾಗುವ ಸಮಯದಲ್ಲಿ, ಪರಿಚಿತರನ್ನು ಹುಡುಕುವುದು ನನಗೂ ಕಷ್ಟವಾಯಿತು. ಅದೇನೇ ಆಗಲಿ, ಅವರಿಗೆ ನನ್ನ ಪರಿಚಯವಿಲ್ಲವೋ, ನನ್ನ ಪರಿಚಯದ ನೆನೆಪಿದೆಯೋ ನಾ ಅರಿಯೆ. ಈ ಸಂದರ್ಭದಲ್ಲಿ ನನಗೆ ತಿಳಿಯಲ್ಪಟ್ಟಂತೆ ನನ್ನ ಸ್ನೇಹಿತೆಯೊಬ್ಬಳು ವಿವಾಹವಾಗುತ್ತಿದ್ದಾಳೆ. ನನ್ನನ್ನು ವಿವಾಹಕ್ಕೆ ಆಮಂತ್ರಿಸದಿರುವುದಕ್ಕೆ ನನಗೇನೂ ಬೇಸರವಿಲ್ಲ. ಆದರೆ ಅವಳಿಗೆ ವಿವಾಹ ಶುಭ ಕೋರದಿದ್ದರೆ ಆ ಗೆಳೆತನ ಸಾರ್ಥಕವಾಗಲಾರದು. ಹಾಗಾಗಿ ಅವಳಿಗೆ ಶುಭಕೋರುತ್ತ ಈ ಗೀತೆಯನ್ನು ಉಡುಗೊರೆಯಾಗಿ ನೀಡುತ್ತಿದ್ದೇನೆ.   ಹೇ ಗೆಳತೀ..,  ನೀ ಮರೆತು ಹೋದೆಯಾ  ನಮ್ಮ ಆ ದಿನದ ಸ್ನೇಹವಾ ಮಾತು ಮೌನವಾಯಿತು    ನೆನಪು ನೀ ಅಳಿಸಿಬಿಟ್ಟೆಯಾ ಸ್ನೇಹ ನೆನಪಿಲ್ಲವೇ ನಿನಗೆ, ಈ ಸ್ನೇಹ ಭಾರವೇ ಮತ್ತೆ, ಅದೇಕೆ ನಾಚಿಕೆ ನಮ್ಮ ಈ ಸ್ನೇಹ ಬೆಸುಗೆಗೆ ಮನವು ನಲಿದಾಡಿತು ನಿನ್ನ ಆ ಸ್ನೇಹದ ನೆನಪಿಗೆ ಹೃದಯ ಶುಭ ಕೋರಿತು ಗೆಳತೀ, ಈ ನಿನ್ನ ಮದುವೆಗೆ ನಮ್ಮ ಸ್ನೇಹಕೋಸ

ಮಳೆಯಲಿ ನಿನ್ನ ಜೊತೆಯಲಿ..,,

ಈ ಇರುಳಲಿ ನಿನ್ನ ಜೊತೆಯಲಿ ... ನಾ ನೆನೆದೆನು ಇಂದು ಮಳೆಯಲಿ ಆ ತಂಪು ನೀರಿನ ಚಳಿಯಲಿ ... ಪ್ರೇಮಾಂಕುರವು ಈ ಮನದಲಿ . ತಂಗಾಳಿ ಬೀಸಿದ ಆ ಕ್ಷಣದಲಿ ... ನೀ ನಡೆದೆ ನನ್ನ ಜೊತೆಯಲಿ ನಿನ್ನ ಸಂಗಡ ಈ ಮಳೆಯಲಿ ... ನನ್ನನೇ ಮರೆತೆ ನಿನ್ನ ಪ್ರೀತಿಲಿ . ನನ್ನ ಮನವು ನಲಿದಿದೆ ಈ ಖುಷಿಯಲಿ ... ನೀನೆಂದೂ ಇರುವೆ ನನ್ನ ಕನಸಲಿ ನಮ್ಮ ಪ್ರೀತಿಯ ಬೆಸುಗೆ ಈ ಮಳೆಯಲಿ ... ಚಂದಿರನೆ ಸಾಕ್ಷಿ ಈ ಇರುಳಲಿ .    ** ಈ ಸಾಲುಗಳನ್ನು ಬರೆಯಲು ನನಗೆ ಸಲಹೆಯನ್ನಿತ್ತ ನನ್ನ ಗೆಳತಿಗೆ ಅರ್ಪಣೆ.